ಬ್ಯಾಂಕಿಂಗ್ ಇತಿಹಾಸದಲ್ಲೇ ಅತಿ ದೊಡ್ಡ ಡೇಟಾ ಸೋರಿಕೆ: ಡಾರ್ಕ್ ವೆಬ್‌ನಲ್ಲಿ ಲಕ್ಷಾಂತರ ಗ್ರಾಹಕರ ಮಾಹಿತಿ ಪ್ರತ್ಯಕ್ಷ!

ಭಾರತದ ಮೂರನೇ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಬರೋಡಾದ ಸುಮಾರು 1 ಟೆರಾಬೈಟ್ (1,000 GB) ಸೂಕ್ಷ್ಮ ದತ್ತಾಂಶಗಳು ಡಾರ್ಕ್ ವೆಬ್‌ನಲ್ಲಿ ಸೋರಿಕೆಯಾಗಿವೆ. ಗ್ರಾಹಕರ ವಿವರ, ದೂರವಾಣಿ ಸಂಖ್ಯೆ, ಆಧಾರ್, ಉಳಿತಾಯ ಹಾಗೂ ಚಾಲ್ತಿ ಖಾತೆಗಳ ದಾಖಲೆಗಳು ಸೇರಿದಂತೆ ಕಾರ್ಪೊರೇಟ್ ಬ್ಯಾಂಕಿಂಗ್ ಮತ್ತು ಎಟಿಎಂ ಸಂಬಂಧಿತ ಪ್ರಮುಖ ಮಾಹಿತಿಗಳು ಹ್ಯಾಕ್ ಆಗಿವೆ ಎಂದು ವರದಿಯಾಗಿದೆ.

ಜುಲೈ 25 ರಂದು 'Ransomware.live' ಜಾಲತಾಣದಲ್ಲಿ ಈ ಸೋರಿಕೆ ಪತ್ತೆಯಾಗಿದ್ದು, 'ಟ್ರಿಪಲ್ ಎಕ್ಸ್' ಎಂಬ ಹ್ಯಾಕರ್ಸ್ ಗುಂಪು ಈ ಸೈಬರ್ ದಾಳಿಯ ಹೊಣೆ ಹೊತ್ತುಕೊಂಡಿದೆ. ಬ್ಯಾಂಕಿನ ಇಮೇಲ್ ವ್ಯವಸ್ಥೆಯಲ್ಲಾದ ತಾಂತ್ರಿಕ ಲೋಪವನ್ನು ಬಳಸಿಕೊಂಡು ಹ್ಯಾಕರ್‌ಗಳು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಈ ಹ್ಯಾಕಿಂಗ್‌ಗೆ ಸಂಬಂಧಿಸಿದ ಕೆಲವು ಮಾದರಿ ದಾಖಲೆಗಳ ಲಿಂಕ್ ಸಕ್ರಿಯವಾಗಿದೆ ಎಂದು ‘ಕ್ಯಾಶ್‌ಲೆಸ್ ಕನ್ಸ್ಯೂಮರ್’ ಸಂಸ್ಥಾಪಕ ಶ್ರೀಕಾಂತ್ ಲಕ್ಷ್ಮಣನ್ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ. ಪ್ರಸ್ತುತ, ಈ ಗಂಭೀರ ಡೇಟಾ ಸೋರಿಕೆಯ ಕುರಿತು ಬ್ಯಾಂಕ್ ಆಫ್ ಬರೋಡಾ ಆಂತರಿಕವಾಗಿ ತನಿಖೆ ಆರಂಭಿಸಿದೆ.







Comments