2029ರ ವೇಳೆಗೆ ಮಾದಕವಸ್ತು ಮುಕ್ತ ಭಾರತ: ಅಮಿತ್ ಶಾ

ನವದೆಹಲಿ: 2029ರ ವೇಳೆಗೆ ದೇಶವನ್ನು ಸಂಪೂರ್ಣ ಮಾದಕವಸ್ತು ಮುಕ್ತಗೊಳಿಸಲು ಕೇಂದ್ರ ಸರ್ಕಾರ ಬೃಹತ್ ಕಾರ್ಯಯೋಜನೆ ರೂಪಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಕಟಿಸಿದ್ದಾರೆ.
ವಿಕಸಿತ ಭಾರತ 2047ರ ಕನಸು ನನಸಾಗಲು ಮಾದಕವಸ್ತು ಮುಕ್ತ ಯುವಶಕ್ತಿ ಅಗತ್ಯ ಎಂದಿರುವ ಅವರು, ನಕ್ಸಲಿಸಂ ಮತ್ತು ಭಯೋತ್ಪಾದನೆ ವಿರುದ್ಧದ ಹೋರಾಟದ ಮಾದರಿಯಲ್ಲೇ ಮಾದಕ ದಂಧೆಯ ಸಂಪೂರ್ಣ ಜಾಲವನ್ನು ನಾಶಪಡಿಸಲು ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ.

ಈ ಗುರಿ ಸಾಧನೆಗಾಗಿ ಮಾದಕವಸ್ತು ಕಳ್ಳಸಾಗಣೆ ತಡೆ, ಕಪ್ಪುಹಣ ನಿಯಂತ್ರಣ ಹಾಗೂ ವ್ಯಸನಿಗಳ ಪುನರ್ವಸತಿಯನ್ನು ಒಳಗೊಂಡ ರಾಷ್ಟ್ರೀಯ ಕಾರ್ಯತಂತ್ರವನ್ನು ಜಾರಿಗೆ ತರಲಾಗಿದೆ. 2014ಕ್ಕೂ ಮೊದಲು ಈ ಹೋರಾಟ ಸಣ್ಣ ಮಟ್ಟದಲ್ಲಿ ನಡೆಯುತ್ತಿತ್ತು, ಆದರೆ ಪ್ರಸ್ತುತ ಇದನ್ನು ರಾಷ್ಟ್ರೀಯ ಭದ್ರತೆಯ ಆದ್ಯತೆಯನ್ನಾಗಿ ಮಾಡಲಾಗಿದೆ. ಎಲ್ಲಾ ರಾಜ್ಯಗಳಲ್ಲಿ ವಿಶೇಷ ಕಾರ್ಯಪಡೆ (ANTF) ರಚಿಸಲಾಗಿದ್ದು, ಕೇಂದ್ರ ಮತ್ತು ರಾಜ್ಯ ತನಿಖಾ ಸಂಸ್ಥೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ ಎಂದು ತಿಳಿಸಿದರು.







Comments