80s AI Trend: ನಿಮ್ಮ ಸೌಂದರ್ಯದ ಫೋಟೋ ಸೈಬರ್ ಅಪರಾಧಿಗಳ ಕೈಗೆ? ಜಾಗ್ರತೆ!

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ '1980ರ ದಶಕದ AI ಫೋಟೋ ಟ್ರೆಂಡ್' ಬಳಕೆದಾರರ ಭದ್ರತೆಗೆ ದೊಡ್ಡ ಅಪಾಯ ತಂದೊಡ್ಡಬಹುದು ಎಂದು ಸೈಬರ್ ತಜ್ಞರು ಎಚ್ಚರಿಸಿದ್ದಾರೆ. ನಿಮ್ಮ ಸೆಲ್ಫಿಗಳನ್ನು 80ರ ದಶಕದ ವಿಂಟೇಜ್ ಲುಕ್‌ಗೆ ಬದಲಾಯಿಸುವ ಈ ಆಪ್‌ಗಳಿಗೆ ಮೂಲ ಫೋಟೋಗಳನ್ನು ಅಪ್‌ಲೋಡ್ ಮಾಡುವುದರಿಂದ ಮುಖದ ಡೇಟಾ (Facial Data) ಕಳುವಾಗುವ ಸಾಧ್ಯತೆಯಿದೆ.
ಈ ಛಾಯಾಚಿತ್ರಗಳನ್ನು ಸೈಬರ್ ಅಪರಾಧಿಗಳು ಡೀಪ್‌ಫೇಕ್ ತಂತ್ರಜ್ಞಾನಕ್ಕೆ, ಅಕ್ರಮ ಚಟುವಟಿಕೆಗಳಿಗೆ ಅಥವಾ ಡಾರ್ಕ್ ವೆಬ್‌ನಲ್ಲಿ ಮಾರಾಟ ಮಾಡಲು ದುರುಪಯೋಗಪಡಿಸಿಕೊಳ್ಳಬಹುದು. ವಿಶೇಷವಾಗಿ ಯುವತಿಯರು ತಮ್ಮ ಫೋಟೋಗಳನ್ನು ಅಪ್‌ಲೋಡ್ ಮಾಡುವಾಗ ಹೆಚ್ಚಿನ ಜಾಗರೂಕತೆ ವಹಿಸಬೇಕು. ಆಕರ್ಷಕ ಟ್ರೆಂಡ್‌ಗಳಿಗೆ ಮರುಳಾಗಿ ನಿಮ್ಮ ಖಾಸಗಿ ಡೇಟಾವನ್ನು ಅಪರಿಚಿತ ಆಪ್‌ಗಳಿಗೆ ನೀಡುವುದನ್ನು ತಕ್ಷಣವೇ ತಪ್ಪಿಸಿ.







Comments