top of page
News Articles
Sathyapatha News Plus


T20WC: ಜಿಂಬಾಬೈ ಎದುರು ಹೀನಾಯವಾಗಿ ಸೋತ ಆಸಿಸ್
ಟಿ20 ವಿಶ್ವಕಪ್ನ ಗ್ರೂಪ್ ಬಿ ಪಂದ್ಯದಲ್ಲಿ ಜಿಂಬಾಬೈ ತಂಡ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿದೆ. 169 ರನ್ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 19.3 ಓವರ್ಗಳಲ್ಲಿ 146 ರನ್ಗಳಿಗೆ ಆಲೌಟ್ ಆಗಿ 23 ರನ್ಗಳ ಸೋಲು ಕಂಡಿತು. ಜಿಂಬಾಬೈ ನೀಡಿದ ಸವಾಲಿನ ಗುರಿಯನ್ನು ಬೆನ್ನಟ್ಟಲು ಇಳಿದ ಆಸ್ಟ್ರೇಲಿಯಾ ಆರಂಭದಿಂದಲೇ ಒತ್ತಡಕ್ಕೆ ಒಳಗಾಯಿತು. ಮಧ್ಯ ಕ್ರಮಾಂಕದಲ್ಲಿ ಮ್ಯಾಟ್ (65) ಮತ್ತು ಮ್ಯಾಕ್ಸ್ವೆಲ್ (31) ಹೋರಾಟ ನೀಡಿದರೂ, ಇತರ ಬ್ಯಾಟ್ಸ್ಮನ್ಗಳು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಜಿಂಬಾಬೈ ಪರ ಬೌಲಿಂಗ್ ದಾಳಿಯಲ್ಲಿ ಮುಝರಬಾನಿ 4 ವಿಕೆಟ್ಗಳು ಪಡೆದು ಆಸಿಸ್ ಬ
Feb 131 min read


ಭಾರತ–ಪಾಕಿಸ್ತಾನ ಪಂದ್ಯ ಪಕ್ಕಾ ಆಗುತ್ತಿದ್ದಂತೇ ವ್ಯಾಪಾರ ಜ್ವರ; ಕೊಲಂಬೋ ಫ್ಲೈಟ್ ದರ ಗಗನಕ್ಕೇರಿಕೆ
ಕ್ರಿಕೆಟ್ ಈಗ ಕೇವಲ ಕ್ರೀಡೆಯಷ್ಟೇ ಅಲ್ಲ, ಕೋಟ್ಯಂತರ ಜನರ ಭಾವನೆಗಳ ಜೊತೆಗೆ ಭಾರೀ ವಾಣಿಜ್ಯ ವ್ಯವಹಾರಗಳ ಕೇಂದ್ರವಾಗಿಬಿಟ್ಟಿದೆ. ಅದರಲ್ಲೂ ಭಾರತ–ಪಾಕಿಸ್ತಾನ ನಡುವಿನ ಪಂದ್ಯವೆಂದರೆ ಜಾಗತಿಕ ಮಟ್ಟದಲ್ಲಿ ಅಪಾರ ಆದಾಯ ತಂದುಕೊಡುವ ಹೈವೋಲ್ಟೇಜ್ ಈವೆಂಟ್. ಈ ಮಾತಿಗೆ ಮತ್ತೊಮ್ಮೆ ಸಾಕ್ಷಿಯೆಂಬಂತೆ, ಐಸಿಸಿ ಟಿ-20 ವಿಶ್ವಕಪ್ 2026ರಲ್ಲಿ ಭಾರತ–ಪಾಕಿಸ್ತಾನ ಪಂದ್ಯ ಖಚಿತವಾಗುತ್ತಿದ್ದಂತೇ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಭಾರೀ ಆದಾಯ ನಷ್ಟದಿಂದ ಪಾರಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಆರಂಭದಲ್ಲಿ ಭಾರತದ ವಿರುದ್ಧ ಪಂದ್ಯ ಆಡದಿರುವ ತೀರ್ಮಾನ ಕೈಗೊಂಡಿತ್ತು. ಆದ
Feb 101 min read


WPL 2026 ಫೈನಲ್: ಡೆಲ್ಲಿ ಕ್ಯಾಪಿಟಲ್ಸ್ನ್ನು 6 ವಿಕೆಟ್ಗಳಿಂದ ಮಣಿಸಿದ RCB – ಎರಡನೇ ಬಾರಿ ಚಾಂಪಿಯನ್!
ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ (WPL) 2026ರ ಫೈನಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಎರಡನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ RCB, ಮುಂಬೈ ಇಂಡಿಯನ್ಸ್ಗಳೊಂದಿಗೆ ಗರಿಷ್ಠ WPL ಪ್ರಶಸ್ತಿಗಳ ಸಂಖ್ಯೆಯಲ್ಲಿ ಸಮಬಲ ಸಾಧಿಸಿದೆ. RCB ನಾಯಕಿ ಸ್ಮೃತಿ ಮಂದಾನಾ ಅವರ ಚತುರ ನಾಯಕತ್ವದಲ್ಲಿ ತಂಡ ಸಂಪೂರ್ಣ ಟೂರ್ನಿಯಲ್ಲಿ ಶಿಸ್ತುಬದ್ಧ ಹಾಗೂ ಸಮತೋಲನ ಪ್ರದರ್ಶನ ನೀಡಿತು. ಲೀಗ್ ಹಂತದಲ್ಲೇ ಐದು ಜಯಗಳಿಸಿ WPL ಇತಿಹಾಸದಲ್ಲೇ ಮೊದಲ ತಂಡ ಎಂಬ ಗೌರವ ಪಡೆದ RCB, ಫೈನಲ್ನಲ್ಲೂ ಅದೇ ಆತ್ಮವಿಶ
Feb 51 min read


ಭಾರತ-ಪಾಕ್ ಕ್ರಿಕೆಟ್ ಸಮರ ರದ್ದು; ಬಾಂಗ್ಲಾ ಪರ ನಿಂತ ಪಾಕ್ ಪ್ರಧಾನಿ ಶೆಹಬಾಝ್ ಷರೀಫ್
ಮುಂಬರುವ 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್ನಲ್ಲಿ ಕ್ರಿಕೆಟ್ ಲೋಕದ ಹೈವೋಲ್ಟೇಜ್ ಪಂದ್ಯವೆಂದೇ ಪರಿಗಣಿಸಲ್ಪಟ್ಟಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹಣಾಹಣಿ ರದ್ದಾಗುವುದು ಬಹುತೇಕ ಖಚಿತವಾಗಿದೆ. ಭಾರತದ ವಿರುದ್ಧದ ಪಂದ್ಯವನ್ನು ಪಾಕಿಸ್ತಾನ ಬಹಿಷ್ಕರಿಸಲಿದೆ ಎಂದು ಪಾಕ್ ಪ್ರಧಾನಿ ಶೆಹಬಾಝ್ ಷರೀಫ್ ಅಧಿಕೃತವಾಗಿ ಘೋಷಿಸಿದ್ದಾರೆ. ಈ ಬಾರಿಯ ವಿಶ್ವಕಪ್ನಿಂದ ಬಾಂಗ್ಲಾದೇಶ ತಂಡವನ್ನು ಹೊರಗಿಟ್ಟಿರುವ ಐಸಿಸಿ ಕ್ರಮವನ್ನು ಖಂಡಿಸಿ, ಬಾಂಗ್ಲಾದೇಶಕ್ಕೆ ಬೆಂಬಲ ಸೂಚಿಸಲು ಪಾಕಿಸ್ತಾನ ಈ ಆಘಾತಕಾರಿ ನಿರ್ಧಾರ ಕೈಗೊಂಡಿದೆ ಎಂದು ಪಾಕ್ ಸಂಸತ್ತಿನ ಕ್ಯಾಬಿನೆಟ್ ಸಭೆಯಲ್ಲಿ ತಿಳಿಸಲಾಗಿದೆ. ಬಾಂಗ್ಲಾ
Feb 51 min read


ಬೆಂಗಳೂರಿನಲ್ಲೇ ಆರ್ಸಿಬಿ ಅಬ್ಬರ? ಚಿನ್ನಸ್ವಾಮಿ ಕ್ರೀಡಾಂಗಣ ಉಳಿಸಿಕೊಳ್ಳಲು ಫ್ರಾಂಚೈಸಿ ಒಲವು!
ಬೆಂಗಳೂರು: ಐಪಿಎಲ್ ಅಭಿಮಾನಿಗಳಿಗೆ, ವಿಶೇಷವಾಗಿ ಆರ್ಸಿಬಿ (RCB) ಬೆಂಬಲಿಗರಿಗೆ ಶುಭ ಸುದ್ದಿಯೊಂದು ಕೇಳಿಬರುತ್ತಿದೆ. ಮುಂಬರುವ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ತವರು ಪಂದ್ಯಗಳನ್ನು ಎಂದಿನಂತೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೇ ಆಡುವ ಇಂಗಿತ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ. ತಂಡಗಳ ತವರು ಮೈದಾನಗಳನ್ನು ಖಚಿತಪಡಿಸಲು ಬಿಸಿಸಿಐ (BCCI) ನೀಡಿದ್ದ ಜ. 27ರ ಗಡುವು ಮುಕ್ತಾಯಗೊಂಡಿದ್ದು, ಆರ್ಸಿಬಿ ತನ್ನ ಪಂದ್ಯಗಳನ್ನು ಬೆಂಗಳೂರಿನಲ್ಲೇ ಆಡುವುದಾಗಿ ತಿಳಿಸಿದೆ ಎನ್ನಲಾಗಿದೆ. ಕ್ರೀಡಾಂಗಣದ ಸುರಕ್ಷತೆ ಮತ್ತು ಇತರೆ ತಾಂತ್ರಿಕ
Jan 281 min read


IND vs NZ T20: 92 ಎಸೆತಗಳಲ್ಲಿ 208 ರನ್ ಚೇಸ್ – ಟೀಂ ಇಂಡಿಯಾ ವಿಶ್ವ ದಾಖಲೆ
ಭಾರತ ಕ್ರಿಕೆಟ್ ತಂಡ ಮತ್ತು ನ್ಯೂಜಿಲೆಂಡ್ ಕ್ರಿಕೆಟ್ ತಂಡ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಐತಿಹಾಸಿಕ ಸಾಧನೆ ಮಾಡಿದೆ. ರಾಯ್ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ 7 ವಿಕೆಟ್ಗಳಿಂದ ಭರ್ಜರಿ ಗೆಲುವು ದಾಖಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ನಿಗದಿತ 20 ಓವರ್ಗಳಲ್ಲಿ 208 ರನ್ಗಳ ದೊಡ್ಡ ಮೊತ್ತವನ್ನು ಕಲೆಹಾಕಿತು. ಆದರೆ ಈ ಗುರಿಯನ್ನು ಟೀಂ ಇಂಡಿಯಾ ಕೇವಲ 92 ಎಸೆತಗಳಲ್ಲಿ (15.2 ಓವರ್) ಬೆನ್ನಟ್ಟಿ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತಿ ಕಡಿಮೆ ಎಸೆತಗಳಲ್
Jan 231 min read


ಭಾರತೀಯ ಕ್ರೀಡಾ ಪ್ರಾಧಿಕಾರದಿಂದ ಬೃಹತ್ ನೇಮಕಾತಿ: 323 ಸಹಾಯಕ ಕೋಚ್ಗಳ ಹುದ್ದೆಗೆ ಅರ್ಜಿ ಆಹ್ವಾನ
ಹೊಸದಿಲ್ಲಿ: ದೇಶದ ಕ್ರೀಡಾಪಟುಗಳಿಗೆ ಅತ್ಯುನ್ನತ ಮಟ್ಟದ ತರಬೇತಿ ಮತ್ತು ಬೆಂಬಲ ನೀಡುವ ನಿಟ್ಟಿನಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರವು (SAI) ಮಹತ್ವದ ಹೆಜ್ಜೆ ಇರಿಸಿದೆ. ಒಟ್ಟು 26 ವಿವಿಧ ಕ್ರೀಡಾ ವಿಭಾಗಗಳಲ್ಲಿ 323 ಸಹಾಯಕ ಕೋಚ್ಗಳ ನೇಮಕಾತಿ ಪ್ರಕ್ರಿಯೆಯನ್ನು ಸಾಯ್ ಅಧಿಕೃತವಾಗಿ ಆರಂಭಿಸಿದೆ. ಈ ನೇಮಕಾತಿಯ ಮೂಲಕ ಅಥ್ಲೆಟಿಕ್ಸ್, ಈಜು, ಶೂಟಿಂಗ್ ಮತ್ತು ಕುಸ್ತಿಯಂತಹ ಪ್ರಮುಖ ಕ್ರೀಡಾ ವಿಭಾಗಗಳಿಗೆ ಹೆಚ್ಚಿನ ಬಲ ಸಿಗಲಿದ್ದು, ದೇಶಾದ್ಯಂತ ಇರುವ ಕ್ರೀಡಾ ಉತ್ಕೃಷ್ಟತಾ ಕೇಂದ್ರಗಳು (NCOE) ಹಾಗೂ ಪ್ರಾದೇಶಿಕ ತರಬೇತಿ ಕೇಂದ್ರಗಳಲ್ಲಿ ಈ ಕೋಚ್ಗಳನ್ನು ನಿಯೋಜಿಸಲಾಗುವುದು. ಈ ನೇಮಕಾತಿಯಲ್ಲಿ ಮಹ
Jan 181 min read


ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ರಿಷಭ್ ಪಂತ್ ಹೊರಕ್ಕೆ: ಭಾರತ ತಂಡಕ್ಕೆ ಆಘಾತ
ವಡೋದರ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಕ್ರಿಕೆಟ್ ಸರಣಿ ಭಾನುವಾರದಿಂದ ಆರಂಭವಾಗಲಿದ್ದು, ಆತಿಥೇಯ ಭಾರತ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ತಂಡದ ಸ್ಟಾರ್ ವಿಕೆಟ್ಕೀಪರ್-ಬ್ಯಾಟರ್ ರಿಷಭ್ ಪಂತ್ ಗಾಯದ ಸಮಸ್ಯೆಯಿಂದಾಗಿ ಇಡೀ ಸರಣಿಯಿಂದ ಹೊರಬಿದ್ದಿದ್ದಾರೆ. ಈ ವಿಷಯವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶನಿವಾರ ಅಧಿಕೃತವಾಗಿ ಖಚಿತಪಡಿಸಿದ್ದು, ಪಂತ್ ಅಲಭ್ಯತೆ ತಂಡದ ಬ್ಯಾಟಿಂಗ್ ಬಲಕ್ಕೆ ದೊಡ್ಡ ಹೊಡೆತ ನೀಡಿದೆ. ಶನಿವಾರ ನಡೆದ ದೀರ್ಘ ಬ್ಯಾಟಿಂಗ್ ಅಭ್ಯಾಸದ ಅವಧಿಯಲ್ಲಿ ಪಂತ್ ಅವರಿಗೆ ಗಾಯವಾಗಿದೆ. ವೇಗದ ಬೌಲರ್ ಎಸೆದ ಚೆಂಡು ಪಂತ್ ಅವರ ಬಲ ಸೊಂಟದ ಭಾಗಕ್ಕೆ ಬಲವಾಗ
Jan 111 min read


RCB vs MI: WPL 2026 ಹೈವೋಲ್ಟೇಜ್ ಪಂದ್ಯ ಇಂದು ಆರಂಭ
ಮಹಿಳಾ ಪ್ರೀಮಿಯರ್ ಲೀಗ್ (WPL)ನಲ್ಲಿ ಇಂದು ಬಹು ನಿರೀಕ್ಷಿತ ಪಂದ್ಯ ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಮುಂಬೈ ಇಂಡಿಯನ್ಸ್ (MI) ತಂಡಗಳು ಮುಖಾಮುಖಿಯಾಗಲಿದ್ದು, ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿದೆ. ಇಂದು ನಡೆಯಲಿರುವ ಈ ಪಂದ್ಯವು Women’s Premier Leagueನ ಪ್ರಮುಖ ಪಂದ್ಯಗಳಲ್ಲೊಂದು. ಎರಡೂ ತಂಡಗಳು ಶಕ್ತಿಶಾಲಿ ಆಟಗಾರರೊಂದಿಗೆ ಕಣಕ್ಕಿಳಿಯುತ್ತಿದ್ದು, ಗೆಲುವಿಗಾಗಿ ಕಠಿಣ ಹೋರಾಟ ನಡೆಸುವ ನಿರೀಕ್ಷೆಯಿದೆ. RCB ತಂಡ ತನ್ನ ಬ್ಯಾಟಿಂಗ್ ಶಕ್ತಿಯನ್ನು ನಂಬಿಕೊಂಡಿದ್ದರೆ, MI ತಂಡ ಸಮತೋಲನದ ತಂಡವಾಗಿ ಕಣಕ್ಕಿಳಿಯಲಿದೆ. ಒಟ್ಟಾರೆ, RCB vs MI ಪಂದ್ಯವು WPLನಲ್ಲಿ
Jan 91 min read


ಸೂರ್ಯಕುಮಾರ್ ಯಾದವ್ ಬಗ್ಗೆ ನಟಿಯ ಹೇಳಿಕೆ – ಕ್ರಿಕೆಟ್ ವಲಯದಲ್ಲಿ ಚರ್ಚೆ
ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕಳೆದ ಒಂದು ವರ್ಷದಿಂದ ಫಾರ್ಮ್ ಸಮಸ್ಯೆ ಎದುರಿಸುತ್ತಿರುವ ಅವರ ಕುರಿತು ಬಾಲಿವುಡ್ ನಟಿ ಹಾಗೂ ಮಾಡೆಲ್ ಖುಷಿ ಮುಖರ್ಜಿ ನೀಡಿರುವ ಹೇಳಿಕೆಗಳು ಕ್ರಿಕೆಟ್ ಹಾಗೂ ಮನರಂಜನಾ ವಲಯಗಳಲ್ಲಿ ಚರ್ಚೆಗೆ ಗ್ರಾಸವಾಗಿವೆ. ನಟಿ ಖುಷಿ ಮುಖರ್ಜಿ ಮಾತನಾಡುತ್ತಾ, “ಹಲವು ಕ್ರಿಕೆಟಿಗರು ನನ್ನ ಹಿಂದೆ ಬಿದ್ದಿದ್ದರು. ಈ ಪೈಕಿ ಸೂರ್ಯಕುಮಾರ್ ಯಾದವ್ ಸಾಕಷ್ಟು ಬಾರಿ ಮೆಸೇಜ್ ಮಾಡುತ್ತಿದ್ದರು. ಆದರೆ ನಮ್ಮಿಬ್ಬರ ನಡುವೆ ಹೆಚ್ಚಿನ ಮಾತುಕತೆ ನಡೆದಿಲ್ಲ. ನಾನು ಅವರ ಜತೆ ಸಂಪರ್ಕ ಹೊಂದಲು ಬಯಸಲಿಲ್ಲ. ಯಾರೊಂದಿಗೂ ಲಿಂಕ್ ಆಗುವುದು ನನಗೆ
Dec 30, 20251 min read


ಟಿ20 ವಿಶ್ವಕಪ್ 2026: ಭಾರತ ತಂಡ ಪ್ರಕಟ
ನವದೆಹಲಿ: 2026ರ ಟಿ20 ವಿಶ್ವಕಪ್ಗಾಗಿ ಭಾರತ ಕ್ರಿಕೆಟ್ ತಂಡವನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. BCCI ಆಯ್ಕೆ ಸಮಿತಿ ಪ್ರಕಟಿಸಿದ ತಂಡಕ್ಕೆ ಸೂರ್ಯಕುಮಾರ್ ಯಾದವ್ ನಾಯಕನಾಗಿ ನೇಮಕಗೊಂಡಿದ್ದು, ಅಕ್ಷರ್ ಪಟೇಲ್ ಉಪನಾಯಕತ್ವ ವಹಿಸಿದ್ದಾರೆ. ಅನುಭವ ಹಾಗೂ ಯುವ ಪ್ರತಿಭೆಯ ಸಮತೋಲನ ಹೊಂದಿರುವ ಈ ತಂಡವು ವಿಶ್ವಕಪ್ ಕಿರೀಟವನ್ನು ಉಳಿಸಿಕೊಳ್ಳುವ ಗುರಿ ಹೊಂದಿದೆ. ಬ್ಯಾಟಿಂಗ್, ಆಲ್ರೌಂಡರ್ ಮತ್ತು ಬೌಲಿಂಗ್ ವಿಭಾಗಗಳಲ್ಲಿ ಬಲಿಷ್ಠ ಸಂಯೋಜನೆ ಮಾಡಲಾಗಿದೆ. 🏏 ಭಾರತ ಟಿ20 ವಿಶ್ವಕಪ್ 2026 ತಂಡ ಸೂರ್ಯಕುಮಾರ್ ಯಾದವ್ (ನಾಯಕ) ಅಭಿಷೇಕ್ ಶರ್ಮಾ ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್) ತಿಲಕ್ ವರ್ಮಾ ಹಾರ
Dec 20, 20251 min read
ವೈಭವ ಸೂರ್ಯವಂಶಿ ಸಿಡಿಲು ಶತಕ! ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ನಲ್ಲಿ ಇಂಡಿಯಾ ‘ಎ’ ಅಬ್ಬರ
ದುಬೈ: ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2025ರಲ್ಲಿ ನಡೆದ ಇಂಡಿಯಾ ‘ಎ’ ಮತ್ತು ಯುಎಇ ನಡುವಿನ ಪಂದ್ಯದಲ್ಲಿ ಭಾರತೀಯ ಯುವ ಕ್ರಿಕೆಟಿಗ ವೈಭವ ಸೂರ್ಯವಂಶಿ ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಅಖಾಡವನ್ನು ರಂಗೇರಿಸಿದರು. ಕೇವಲ 32 ಎಸೆತಗಳಲ್ಲಿ ಸ್ಫೋಟಕ ಶತಕ ಬಾರಿಸಿದ ಸೂರ್ಯವಂಶಿ ಸ್ಟೇಡಿಯಂನಲ್ಲಿ ರನ್ಗಳ ಹೊಳೆ ಹರಿಸಿದರು. ಪರಿಪೂರ್ಣ ಆಕ್ರಮಣಕಾರಿ ಶೈಲಿಯಲ್ಲಿ ಆಡಿದ ಸೂರ್ಯವಂಶಿ ಫೋರ್, ಸಿಕ್ಸರ್ಗಳ ಮಳೆ ಸುರಿಸಿ ಯುಎಇ ಬೌಲರ್ಗಳನ್ನು ಸಂಪೂರ್ಣ ಗಾಬರಿಗೊಳಿಸಿದರು. ಅವರ ಬ್ಯಾಟಿಂಗ್ಗಳಿಂದಾಗಿ ಇಂಡಿಯಾ ‘ಎ’ ತಂಡ ದೊಡ್ಡ ಮೊತ್ತದ ದಿಸೆಯಲ್ಲಿ ಭರ್ಜರಿಯಾಗಿ ಸಾಗಿದೆ. ಪಂದ್ಯದ ಆರಂಭದಿಂದಲೇ ಆಕ್ರಾಮಕ
Nov 14, 20251 min read


ಬಾಂಗ್ಲಾದೇಶ ವಿಶ್ವಕಪ್ ಕಬಡ್ಡಿ: ಮಂಗಳೂರಿನ ಧನಲಕ್ಷ್ಮೀ ಪೂಜಾರಿಗೆ ಭಾರತ ತಂಡದಲ್ಲಿ ಸ್ಥಾನ!
ಬಾಂಗ್ಲಾದೇಶದಲ್ಲಿ ನಡೆಯಲಿರುವ ಪ್ರತಿಷ್ಠಿತ ಎರಡನೇ ವಿಶ್ವಕಪ್ ಮಹಿಳಾ ಕಬಡ್ಡಿ ಪಂದ್ಯಾಟಕ್ಕೆ ಭಾರತೀಯ ತಂಡಕ್ಕೆ ಕರ್ನಾಟಕದ ಹೆಮ್ಮೆಯ ಕ್ರೀಡಾಪಟು ಧನಲಕ್ಷ್ಮೀ ಪೂಜಾರಿ ಆಯ್ಕೆಯಾಗಿದ್ದಾರೆ. ಕರಾವಳಿ ನಗರಿ ಮಂಗಳೂರಿನ ಯುವತಿ ಧನಲಕ್ಷ್ಮೀ ಅವರು ಇಡೀ ಕರ್ನಾಟಕ ರಾಜ್ಯದಿಂದಲೇ ರಾಷ್ಟ್ರೀಯ ಕಬಡ್ಡಿ ತಂಡವನ್ನು ಪ್ರತಿನಿಧಿಸುತ್ತಿರುವ ಏಕೈಕ ಆಟಗಾರ್ತಿಯಾಗಿದ್ದಾರೆ. ಈ ಆಯ್ಕೆಯು ದಕ್ಷಿಣ ಕನ್ನಡ ಜಿಲ್ಲೆಯ ಕ್ರೀಡಾ ಇತಿಹಾಸದಲ್ಲಿ ಒಂದು ಹೆಮ್ಮೆಯ ಮೈಲಿಗಲ್ಲನ್ನು ಸ್ಥಾಪಿಸಿದೆ. ಅವರ ಈ ಸಾಧನೆಗೆ ರಾಜ್ಯಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಸುರತ್ಕಲ್ನ ಇಡ್ಯಾ ನಿವಾಸಿ ಸಂಜೀವ ಪೂಜಾರಿಯವರ ಮ
Nov 11, 20251 min read
Archive
bottom of page



