ತೈಲ ಬಿಕ್ಕಟ್ಟು: 'ವರ್ಕ್ ಫ್ರಮ್ ಹೋಮ್' ಅಳವಡಿಸಿ, ಚಿನ್ನ ಖರೀದಿ ಬೇಡ ಎಂದ ಪ್ರಧಾನಿ ಮೋದಿ

ಮಧ್ಯಪ್ರಾಚ್ಯ ಯುದ್ಧದಿಂದಾಗಿ ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ, ದೇಶದ ವಿದೇಶಿ ವಿನಿಮಯವನ್ನು ಉಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಜನತೆಗೆ ಮಹತ್ವದ ಮನವಿ ಮಾಡಿದ್ದಾರೆ. ಸಿಕಂದರಾಬಾದ್‌ನಲ್ಲಿ ಮಾತನಾಡಿದ ಅವರು, ಇಂಧನ ಉಳಿತಾಯಕ್ಕಾಗಿ ಕರೋನಾ ಕಾಲದ 'ಮನೆಯಿಂದ ಕೆಲಸ' (Work From Home) ಪದ್ಧತಿಯನ್ನು ಪುನರಾರಂಭಿಸಬೇಕು ಮತ್ತು ಆನ್‌ಲೈನ್ ಸಭೆಗಳಿಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
ಇಂಧನ ಸಂರಕ್ಷಣೆಯನ್ನು ರಾಷ್ಟ್ರೀಯ ಜವಾಬ್ದಾರಿ ಎಂದು ಬಣ್ಣಿಸಿದ ಪ್ರಧಾನಿ, ಇಂದಿನ ಆರ್ಥಿಕ ಅನಿಶ್ಚಿತತೆಯ ನಡುವೆ ಸುವಂತೆ ಸೂಚಿಸಿದರು. ವಿಶೇಷವಾಗಿ, ದೇಶದ ಆರ್ಥಿಕ ಒತ್ತಡವನ್ನು ಕಡಿಮೆ ಮಾಡಲು ಕನಿಷ್ಠ ಒಂದು ವರ್ಷದವರೆಗೆ ಮದುವೆ ಸಮಾರಂಭಗಳಿಗೆ ಚಿನ್ನ ಖರೀದಿ ಮಾಡುವುದನ್ನು ಬಿಟ್ಟು ಸಹಕರಿಸಬೇಕು ಎಂದು ಅವರು ನಾಗರಿಕರಲ್ಲಿ ವಿನಂತಿಸಿಕೊಂಡಿದ್ದಾರೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 126 ಡಾಲರ್‌ಗೆ ಏರಿಕೆಯಾಗಿರುವುದರಿಂದ, ತೈಲ ಕಂಪನಿಗಳು ಭಾರಿ ನಷ್ಟ ಅನುಭವಿಸುತ್ತಿವೆ. ಇದರ ಪರಿಣಾಮವಾಗಿ ಮೇ 15ರ ಒಳಗೆ ಪೆಟ್ರೋಲ್, ಡೀಸೆಲ್ ಹಾಗೂ ಎಲ್‌ಪಿಜಿ ಸಿಲಿಂಡರ್ ಬೆಲೆಗಳಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. ಈ ಆರ್ಥಿಕ ಹೊಡೆತದಿಂದ ಪಾರಾಗಲು ಇಂಧನ ಬಳಕೆ ಕಡಿತಗೊಳಿಸುವುದು ಅನಿವಾರ್ಯವಾಗಿದೆ ಎಂದು ಮೋದಿ ತಿಳಿಸಿದ್ದಾರೆ.







Comments