ವಾಟ್ಸಪ್‌ನಲ್ಲಿ ಮದುವೆ ಕಾರ್ಡ್ ಬಂತಾ? ಎಚ್ಚರ, ಅರಣ್ಯ ಅಧಿಕಾರಿಗೆ 9.96 ಲಕ್ಷ ರೂ. ವಂಚನೆ!

ವಾಟ್ಸಪ್‌ನಲ್ಲಿ ಅಪರಿಚಿತ ಸಂಖ್ಯೆಯಿಂದ ಬಂದ ಮದುವೆ ಆಹ್ವಾನ ಪತ್ರಿಕೆಯ ಫೈಲ್ ಓಪನ್ ಮಾಡಿದ ಸರ್ಕಾರಿ ಅಧಿಕಾರಿಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು ಬರೋಬ್ಬರಿ 9.96 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ಅರಣ್ಯ ಇಲಾಖೆಯ ಉದ್ಯೋಗಿ ರಮೇಶ್ ಬಾಬು ಅವರಿಗೆ ಜುಲೈ 14ರಂದು ವಾಟ್ಸಪ್‌ನಲ್ಲಿ ಅಪರಿಚಿತ ಸಂಖ್ಯೆಯಿಂದ ಆಹ್ವಾನ ಪತ್ರಿಕೆಯ ಸಂದೇಶ ಬಂದಿತ್ತು. ಅದನ್ನು ಪರಿಚಿತರದ್ದು ಎಂದು ನಂಬಿ ಅವರು ಫೈಲ್ ಡೌನ್‌ಲೋಡ್ ಮಾಡಿದ್ದಾರೆ.

ಈ ರೀತಿಯ 'ಎಪಿಕೆ ಫೈಲ್' (APK File) ಕ್ಲಿಕ್ ಮಾಡುತ್ತಿದ್ದಂತೆ ಸೈಬರ್ ಕಳ್ಳರು ಮೊಬೈಲ್ ಹ್ಯಾಕ್ ಮಾಡಿ ಹಣ ದೋಚಿದ್ದಾರೆ. ಅಪರಿಚಿತ ಲಿಂಕ್ ಹಾಗೂ ಫೈಲ್‌ಗಳ ಕುರಿತು ಜಾಗರೂಕರಾಗಿರಲು ಪೊಲೀಸರು ಸೂಚಿಸಿದ್ದಾರೆ.







Comments