ವಾಟ್ಸಪ್‌ನಿಂದ ಹೊಸ ಕ್ರಾಂತಿ: ಇನ್ನು ಫೋನ್ ನಂಬರ್ ಇಲ್ಲದೆಯೂ ಚಾಟ್ ಸಾಧ್ಯ!

ಮೆಟಾ ಒಡೆತನದ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಪ್, ಬಳಕೆದಾರರ ಗೌಪ್ಯತೆಯನ್ನು ಮತ್ತಷ್ಟು ಬಲಪಡಿಸಲು ಶೀಘ್ರದಲ್ಲೇ ಅತ್ಯಂತ ಪ್ರಮುಖ ಬದಲಾವಣೆಯೊಂದನ್ನು ತರಲು ಸಜ್ಜಾಗಿದೆ.
ಪ್ರಸ್ತುತ ವಾಟ್ಸಪ್‌ನಲ್ಲಿ ಚಾಟ್ ಮಾಡಲು ಫೋನ್ ನಂಬರ್ ಕಡ್ಡಾಯವಾಗಿದೆ. ಆದರೆ ಇನ್ನು ಮುಂದೆ ಬಳಕೆದಾರರು ತಮ್ಮ ವೈಯಕ್ತಿಕ ನಂಬರ್ ಹಂಚಿಕೊಳ್ಳದೆಯೇ ಇತರರೊಂದಿಗೆ ಸಂವಹನ ನಡೆಸಲು ಅನುವು ಮಾಡಿಕೊಡುವ 'ಯೂಸರ್ ನೇಮ್' ವೈಶಿಷ್ಟ್ಯವನ್ನು ಸಂಸ್ಥೆ ಪರೀಕ್ಷಿಸುತ್ತಿದೆ.
ಇನ್‌ಸ್ಟಾಗ್ರಾಮ್ ಅಥವಾ ಟೆಲಿಗ್ರಾಂ ಮಾದರಿಯಲ್ಲಿಯೇ ಪ್ರತಿಯೊಬ್ಬರಿಗೂ ವಿಶಿಷ್ಟ ಯೂಸರ್ ನೇಮ್ ಸಿಗಲಿದ್ದು, ಮೊದಲು ಬಂದವರಿಗೆ ಆದ್ಯತೆಯ ಮೇರೆಗೆ ಹೆಸರುಗಳು ಲಭ್ಯವಾಗಲಿವೆ. ಇದರಿಂದ ಅಪರಿಚಿತರಿಂದ ನಿಮ್ಮ ಫೋನ್ ನಂಬರ್ ಮುಚ್ಚಿಡಲು ಸಾಧ್ಯವಾಗುತ್ತದೆ.







Comments