ವೆನೆಜುವೆಲಾ ಭೂಕಂಪ: ಮಗಳನ್ನು ಬದುಕಿಸಿ ಪ್ರಾಣತ್ಯಾಗ ಮಾಡಿದ ತಾಯಿ

ವೆನೆಜುವೆಲಾದ ಭೀಕರ ಭೂಕಂಪದಲ್ಲಿ ಫುಟ್ಬಾಲ್ ಆಟಗಾರ ಹೆಕ್ಟರ್ ಬೆಲ್ಲೊ ಪತ್ನಿ ಆಂಡ್ರಿಯಾ ಬೆಲ್ಲೊ ತಮ್ಮ ಒಂದು ವರ್ಷದ ಮಗಳು ಅಲಾನಾಳನ್ನು ರಕ್ಷಿಸುವ ವೇಳೆ ಪ್ರಾಣತ್ಯಾಗ ಮಾಡಿದ್ದಾರೆ. ಕಟ್ಟಡ ಕುಸಿದು ಅವಶೇಷಗಳಡಿ ಸಿಲುಕಿದ್ದ ಆಂಡ್ರಿಯಾ, ಮಗಳನ್ನು ಎದೆಗೆ ಬಿಗಿಯಾಗಿ ಅಪ್ಪಿಕೊಂಡು ಮೃತಪಟ್ಟಿದ್ದಾರೆ.
ತಾಯಿಯ ಈ ರಕ್ಷಣಾತ್ಮಕ ನಡೆಯಿಂದಾಗಿ ಪುಟ್ಟ ಮಗು ಪವಾಡಸದೃಶವಾಗಿ ಬದುಕುಳಿದಿದೆ. ರಕ್ಷಣಾ ಸಿಬ್ಬಂದಿ ಮಗುವನ್ನು ಸುರಕ್ಷಿತವಾಗಿ ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದು, ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮನಕಲುಕುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಶ್ವದಾದ್ಯಂತ ಜನರು ತಾಯಿಯ ಅಪಾರ ಪ್ರೀತಿ ಮತ್ತು ಸುಪ್ರೀಂ ತ್ಯಾಗಕ್ಕೆ ಕಂಬನಿ ಮಿಡಿದಿದ್ದಾರೆ. ವೆನೆಜುವೆಲಾದಲ್ಲಿ ಸದ್ಯ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.







Comments