ರಾಜ್ಯದ ವಾಹನ ಸವಾರರಿಗೆ ಶಾಕ್..!
- Mar 24
- 1 min read

ರಾಜ್ಯದ ವಾಹನ ಸವಾರರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದ್ದು, ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ದರ ಏರಿಕೆಯಾಗುವುದು ಬಹುತೇಕ ಖಚಿತವಾಗಿದೆ. ಹೋಲ್‌ಸೇಲ್ ಪ್ರೈಸ್ ಇಂಡೆಕ್ಸ್ ಆಧಾರದ ಮೇಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಪ್ರತಿ ವರ್ಷದಂತೆ ಈ ಬಾರಿಯೂ ಶೇ 3 ರಿಂದ 5 ರಷ್ಟು ದರ ಹೆಚ್ಚಿಸಲು ನಿರ್ಧರಿಸಿದೆ. ಈ ಕುರಿತು ಶೀಘ್ರದಲ್ಲೇ ಅಧಿಕೃತ ಅಧಿಸೂಚನೆ ಹೊರಬೀಳಲಿದ್ದು, ಅಗತ್ಯ ವಸ್ತುಗಳ ಸಾಗಾಣಿಕೆ ವೆಚ್ಚವೂ ಅಧಿಕವಾಗುವ ಆತಂಕ ಎದುರಾಗಿದೆ.

ಈಗಾಗಲೇ ಇಂಧನ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಈ ಪರಿಷ್ಕೃತ ಟೋಲ್ ದರಗಳು ಮತ್ತಷ್ಟು ಹೊರೆಯಾಗಲಿವೆ. ವಿಶೇಷವಾಗಿ ಬೆಂಗಳೂರಿನಿಂದ ಕೇರಳದಂತಹ ದೂರದ ಊರುಗಳಿಗೆ ಸಂಚರಿಸುವವರಿಗೆ ಪ್ರಯಾಣದ ವೆಚ್ಚದಲ್ಲಿ ಗಣನೀಯ ಏರಿಕೆಯಾಗಲಿದೆ. ಪ್ರಸ್ತುತ ಸಾವಿರಾರು ರೂಪಾಯಿ ಟೋಲ್ ಪಾವತಿಸುತ್ತಿರುವ ವಾಹನ ಮಾಲೀಕರು, ಈ ಹೊಸ ದರ ಜಾರಿಯಾದ ನಂತರ ತಮ್ಮ ಪ್ರವಾಸದ ಬಜೆಟ್ ಅನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.







Comments