'ವಂದೇ ಮಾತರಂ ಗೀತೆಗೆ ಅವಮಾನ ಮಾಡುವುದು ಕ್ರಿಮಿನಲ್ ಅಪರಾಧ- ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರ

ರಾಷ್ಟ್ರೀಯ ಗೀತೆಯಾದ ‘ವಂದೇ ಮಾತರಂ’ಗೆ ಉಂಟಾಗುವ ಅವಮಾನವನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸುವ ‘ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ (ತಿದ್ದುಪಡಿ) ವಿಧೇಯಕ – 2026’ ಅನ್ನು ರಾಜ್ಯಸಭೆಯು ಧ್ವನಿ ಮತದ ಮೂಲಕ ಅಂಗೀಕರಿಸಿದೆ. ರಾಷ್ಟ್ರಗೀತೆ ಜನಗಣಮನಗೆ ನೀಡಲಾಗುವ ಸಮಾನ ಗೌರವವನ್ನು ವಂದೇ ಮಾತರಂಗೂ ನೀಡಲು ಇದರಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ನಡೆದ ಪ್ರತಿಭಟನಾಕಾರರ ಮೇಲಿನ ಪೊಲೀಸ್ ಕ್ರಮದ ಕುರಿತು ಗೃಹ ಸಚಿ

ವರ ಹೇಳಿಕೆಗೆ ಪಟ್ಟು ಹಿಡಿದ ವಿರೋಧ ಪಕ್ಷಗಳು ಸದನದಲ್ಲಿ ತೀವ್ರ ಗಲಾಟೆ ನಡೆಸಿದವು. ವಿಪಕ್ಷಗಳ ಈ ಪ್ರತಿಭಟನೆ ಮತ್ತು ಗದ್ದಲದ ನಡುವೆಯೂ ಉಪಸಭಾಪತಿ ಹರಿವಂಶ್ ಅವರು ಸದನದ ಕಲಾಪವನ್ನು ಮುಂದುವರಿಸಿದರು.
ಚರ್ಚೆಯ ವೇಳೆ ಕೇಂದ್ರ ಸಚಿವ ರಾಮದಾಸ್ ಅಥಾವಳೆ ಮಾತನಾಡುತ್ತಿದ್ದಾಗ ವಿಪಕ್ಷಗಳು ಕಲಾಪದಿಂದ ಹೊರನಡೆದವು. ವಿಧೇಯಕದ ಮೇಲಿನ ಚರ್ಚೆಗೆ ಉತ್ತರಿಸಿದ ಕೇಂದ್ರ ಗೃಹ ರಾಜ್ಯ ಸಚಿವ ನಿತ್ಯಾನಂದ ರೈ, ತುಷ್ಟೀಕರಣ ರಾಜಕಾರಣದ ಮೂಲಕ ಕಾಂಗ್ರೆಸ್ ದೇಶದ ಗೌರವಕ್ಕೆ ಧಕ್ಕೆ ತರುತ್ತಿದೆ ಎಂದು ನೇರವಾಗಿ ವಾಗ್ದಾಳಿ ನಡೆಸಿದರು.







Comments