ಯಶವಂತಪುರ-ಮಂಗಳೂರು ವಂದೇ ಭಾರತ್ 2ನೇ ಪ್ರಾಯೋಗಿಕ ಸಂಚಾರ: ಕಬಕ ಪುತ್ತೂರಿನಲ್ಲೂ ನಿಲುಗಡೆ

ಮಂಗಳೂರು: ಯಶವಂತಪುರ ಹಾಗೂ ಮಂಗಳೂರು ಜಂಕ್ಷನ್ ನಡುವೆ ಪ್ರಸ್ತಾವಿತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ 16 ಬೋಗಿಗಳ 2ನೇ ಪ್ರಾಯೋಗಿಕ ಸಂಚಾರ ಗುರುವಾರ ನಡೆಯಲಿದೆ.
ರೈಲ್ವೆ ಮಂಡಳಿಯ ಸೂಚನೆಯಂತೆ ಈ ಖಾಲಿ ರೈಲಿನ ಪ್ರಯೋಗಾರ್ಥ ಸಂಚಾರ ನಡೆಯಲಿದ್ದು, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ ಹಾಗೂ ಪಡೀಲು ನಿಲ್ದಾಣಗಳ ಜೊತೆಗೆ ಈ ಬಾರಿ ಕಬಕ ಪುತ್ತೂರು ನಿಲ್ದಾಣದಲ್ಲೂ ನಿಲುಗಡೆ ನೀಡಲಾಗಿದೆ. ಯಶವಂತಪುರದಿಂದ ಬೆಳಿಗ್ಗೆ 6.50ಕ್ಕೆ ಹೊರಡುವ ರೈಲು ಮಧ್ಯಾಹ್ನ 2.50ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.
ಮರಳಿ ಮಧ್ಯಾಹ್ನ 3.10ಕ್ಕೆ ಹೊರಟು ರಾತ್ರಿ 10.30ಕ್ಕೆ ಯಶವಂತಪುರ ತಲುಪುವ ನಿರೀಕ್ಷೆಯಿದೆ. ಈ ವೇಳೆ ತಾಂತ್ರಿಕ ತಂಡವು ಕಡಿದಾದ ಘಾಟ್ ವಿಭಾಗದಲ್ಲಿ ರೈಲಿನ ವೇಗ ಮತ್ತು ಸಂಚಾರ ಸಮಯವನ್ನು ಪರಿಶೀಲಿಸಿ ವರದಿ ಸಲ್ಲಿಸಲಿದೆ.







Comments