ಯೂರಿಯಾ ಖರೀದಿಗೆ ರೈತ ಗುರುತಿನ ಚೀಟಿ ಕಡ್ಡಾಯ
- 6 days ago
- 1 min read

ಶಿವಮೊಗ್ಗ: ಇನ್ನು ಮುಂದೆ ಯೂರಿಯಾ ರಸಗೊಬ್ಬರ ಖರೀದಿಸಲು ರೈತರಿಗೆ 'ರೈತ ಗುರುತಿನ ಚೀಟಿ' (FID) ಕಡ್ಡಾಯಗೊಳಿಸಲಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ. ರಸಗೊಬ್ಬರ ವಿತರಣೆಯಲ್ಲಿ ಪಾರದರ್ಶಕತೆ ತರಲು ಮತ್ತು ಕಪ್ಪು ಮಾರುಕಟ್ಟೆ ತಡೆಯಲು ಈ ಹೊಸ ನಿಯಮವನ್ನು 2026-27ರ ಖಾರಿಫ್ ಋತುವಿನಿಂದ ಜಾರಿಗೆ ತರಲಾಗುತ್ತಿದೆ.

ಕೆ-ಕಿಸಾನ್ ಸಾಫ್ಟ್‌ವೇರ್ ಮೂಲಕ ರೈತರ ಭೂಮಿ ಮತ್ತು ಬೆಳೆ ಆಧರಿಸಿ ಅಗತ್ಯವಿರುವ ಪ್ರಮಾಣದ ಗೊಬ್ಬರವನ್ನು ಮಾತ್ರ ವಿತರಿಸಲಾಗುತ್ತದೆ. ಈ ಚೀಟಿ ಇಲ್ಲದ ರೈತರು ಪಹಣಿ, ಆಧಾರ್ ಮತ್ತು ಬ್ಯಾಂಕ್ ಪಾಸ್‌ಬುಕ್ ನೀಡಿ ತಕ್ಷಣ ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ.







Comments