;
top of page

ತಿರುಮಲ ಭಕ್ತರಿಗೆ ಶೀಘ್ರ ಪ್ರಸಾದ: ಕ್ಯೂಲೈನ್‌ಗಳಲ್ಲಿ 'ಕನ್ವೇಯರ್ ಬೆಲ್ಟ್' ತಂತ್ರಜ್ಞಾನ ಜಾರಿ!

Jul 21
1 min read

ತಿರುಮಲಕ್ಕೆ ಆಗಮಿಸುವ ಲಕ್ಷಾಂತರ ಭಕ್ತಾದಿಗಳಿಗೆ ಶೀಘ್ರ ಹಾಗೂ ಸುಲಭವಾಗಿ ಆಹಾರ-ಪಾನೀಯ ತಲುಪಿಸಲು ತಿರುಮಲ ತಿರುಪತಿ ದೇವಸ್ಥಾನ ಮಂಡಳಿ (TTD) ಹೊಸ ತಂತ್ರಜ್ಞಾನಾಧಾರಿತ ಹೆಜ್ಜೆಯನ್ನಿಟ್ಟಿದೆ. ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾಯುವ ಭಕ್ತರಿಗೆ ‘ಆಹಾರ ಪೂರೈಸುವ ಕನ್ವೇಯರ್ ವ್ಯವಸ್ಥೆ’ಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ.

ಪ್ರಸ್ತುತ ಟಿಟಿಡಿಯ ಆಕ್ಟೋಪಸ್ ಕಟ್ಟಡದಿಂದ ಕೃಷ್ಣ ತೇಜ ಅತಿಥಿ ಗೃಹದವರೆಗೆ 3.5 ಕಿ.ಮೀ. ಉದ್ದದ ಸಾಲಿನಲ್ಲಿ ನಿರಂತರವಾಗಿ ಅನ್ನಪ್ರಸಾದ ವಿತರಿಸಲಾಗುತ್ತಿದೆ. ಮಾನವ ಶ್ರಮವನ್ನು ಕಡಿಮೆ ಮಾಡಿ, ಯಂತ್ರಗಳ ನೆರವಿನಿಂದ ಪ್ರಸಾದ ವಿತರಣೆಯನ್ನು ಇನ್ನಷ್ಟು ವೇಗಗೊಳಿಸಲು ದಾನಿಗಳ ಸಹಾಯದಿಂದ ಈ ಚಲಿಸುವ ಊಟದ ವ್ಯವಸ್ಥೆಯನ್ನು ರೂಪಿಸಲಾಗಿದೆ.

ಸುಮಾರು 3.50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ಕನ್ವೇಯರ್ ಯಂತ್ರವನ್ನು ಪ್ರಸ್ತುತ ಶಿಲಾ ತೋರಣಂ ಬಳಿಯ ಗೇಟ್ 45ರಲ್ಲಿ ಪ್ರಾಯೋಗಿಕವಾಗಿ ಪರೀಕ್ಷಿಸಲಾಗುತ್ತಿದೆ. ಈ ಪ್ರಯೋಗ ಯಶಸ್ವಿಯಾದರೆ, ಸರತಿ ಸಾಲಿನ ಉಳಿದ ಪ್ರಮುಖ ಪ್ರದೇಶಗಳಿಗೂ ಇದನ್ನು ವಿಸ್ತರಿಸಲು ಟಿಟಿಡಿ ಯೋಜಿಸಿದೆ.


Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page