ತಮಿಳುನಾಡು ರಾಜಕೀಯದಲ್ಲಿ ಹೊಸ ಇತಿಹಾಸ: ಮೈತ್ರಿ ಬೆಂಬಲದೊಂದಿಗೆ ಸಿಎಂ ಗದ್ದುಗೆಗೆ ನಟ ವಿಜಯ್ ಸಜ್ಜು!

ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ 108 ಸ್ಥಾನ ಗೆದ್ದಿದ್ದ ನಟ ವಿಜಯ್ ನೇತೃತ್ವದ **ತಮಿಳಗ ವೆಟ್ರಿ ಕಳಗಂ (TVK)** ಪಕ್ಷಕ್ಕೆ ಇದೀಗ ಕಾಂಗ್ರೆಸ್, ವಿಸಿಕೆ, ಸಿಪಿಐ ಮತ್ತು ಸಿಪಿಐ(ಎಂ) ಬೆಂಬಲ ಘೋಷಿಸಿವೆ. ಇದರಿಂದಾಗಿ ಬಹುಮತಕ್ಕೆ ಅಗತ್ಯವಿದ್ದ **118**ರ ಮ್ಯಾಜಿಕ್ ಸಂಖ್ಯೆಯನ್ನು ಟಿವಿಕೆ ದಾಟಿದ್ದು, ಸರ್ಕಾರ ರಚನೆಯ ಹಾದಿ ಸುಗಮವಾಗಿದೆ.
ಮೈತ್ರಿ ಪಕ್ಷಗಳ ಬೆಂಬಲದೊಂದಿಗೆ ವಿಜಯ್ ಇಂದು ಸಂಜೆ 6 ಗಂಟೆಗೆ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಈ ವೇಳೆ ಬೆಂಬಲಿತ ಶಾಸಕರ ಪಟ್ಟಿಯನ್ನು ಸಲ್ಲಿಸಿ, ಪ್ರಮಾಣವಚನ ಸ್ವೀಕಾರದ ದಿನಾಂಕವನ್ನು ನಿಗದಿಪಡಿಸುವ ಸಾಧ್ಯತೆಯಿದೆ.

ತಮಿಳುನಾಡು ರಾಜಕೀಯ ಇತಿಹಾಸದಲ್ಲೇ ಮೊದಲ ಬಾರಿಗೆ ನಟ ವಿಜಯ್ ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿಯುತ್ತಿರುವುದು ದೊಡ್ಡ ಸಂಚಲನ ಮೂಡಿಸಿದೆ. ರಾಜಕೀಯ ಅನಿಶ್ಚಿತತೆ ಅಂತ್ಯಗೊಂಡಿರುವುದು ಅಭಿಮಾನಿಗಳು ಹಾಗೂ ಟಿವಿಕೆ ಕಾರ್ಯಕರ್ತರಲ್ಲಿ ಭಾರೀ ಸಂಭ್ರಮ ತಂದಿದೆ.







Comments