ಕೌಟುಂಬಿಕ ಕಿರುಕುಳಕ್ಕೆ ವಿವಾಹಿತೆ ಬಲಿ: ಅತ್ತೆ, ಮಾವ, ನಾದಿನಿ ಬಂಧನ!

ಸುಳ್ಯ ತಾಲೂಕಿನಲ್ಲಿ ಕೌಟುಂಬಿಕ ಕಿರುಕುಳದಿಂದಾಗಿ ಫಾತಿಮತ್ ನಿಶಾನ ಎಂಬ ವಿವಾಹಿತೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ಮಾವ ಸಿ.ಪಿ. ಅಳವಿ, ಅತ್ತೆ ಅಯಿಷಾ ಹಾಗೂ ನಾದಿನಿ ಫಸಿಲಾ ಅವರನ್ನು ಸುಳ್ಯ ಠಾಣೆ ಪೊಲೀಸರು ಜುಲೈ 22ರಂದು ಬಂಧಿಸಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದ ಫಾತಿಮತ್ ನಿಶಾನ ಅವರು ಜುಲೈ 18ರ ರಾತ್ರಿ ತಾಯಿಗೆ ಕರೆ ಮಾಡಿ, ಗಂಡನ ಮನೆಯವರಿಂದ ತಮಗೆ ಸತತವಾಗಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದರೆಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಮೃತರ ಕುಟುಂಬದವರು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಭಾರತೀಯ ನ್ಯಾಯ ಸಂಹಿತೆ (BNS) ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಬಂಧಿತ ಮೂವರು ಆರೋಪಿಗಳನ್ನು ವಿಚಾರಣೆಗೊಳಪಡಿಸಿದ್ದು, ಶೀಘ್ರವೇ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.







Comments