ಶಾಸ್ತ್ರಿ ಸರ್ಕಲ್‌ನಲ್ಲಿ ಗುಂಡಿ ಗಂಡಾಂತರ ಬಾಳೆಗಿಡ ನೆಟ್ಟರೂ ಎಚ್ಚೆತ್ತುಕೊಳ್ಳದ ಆಡಳಿತ: ಈ ‘ಮರಣಗುಂಡಿ’ಗೆ ಕಾಯಂ ಪರಿಹಾರ ಎಂದು?

ಸುಳ್ಯದ ಹೃದಯಭಾಗ ಶಾಸ್ತಿ ಸರ್ಕಲ್‌ನಲ್ಲಿ ಬೇಸಿಗೆಯಲ್ಲಿ ತೆಗೆದ ಪೈಪ್‌ಲೈನ್ ಗುಂಡಿ ಈಗ ಸಾರ್ವಜನಿಕರನ್ನು ಬಲಿ ಪಡೆಯಲು ಕಾದಿದೆ. ಆಟೋ ಚಾಲಕರು ಬಾಳೆಗಿಡ ನೆಟ್ಟು ಮೂರು ಬಾರಿ ಪ್ರತಿಭಟಿಸಿದರೂ, ಆಡಳಿತ ವರ್ಗದ ‘ಕಣ್ಣೊರೆಸುವ ತಂತ್ರ’ ಬರೀ ಜಲ್ಲಿಕಲ್ಲು ಹಾಕುವುದಕ್ಕಷ್ಟೇ ಸೀಮಿತವಾಗಿದೆ. ಮಳೆಗೆ ಕಲ್ಲು ಕೊಚ್ಚಿಹೋಗಿ ವಾಹನ ಸವಾರರು ಅಡ್ಡಬಿದ್ದು ಮೂಳೆ ಮುರಿದುಕೊಳ್ಳುವ ಭೀತಿಯಲ್ಲಿದ್ದಾರೆ.
ಅಷ್ಟೇ ಏಕೆ, ಕೆಲವು ದಿನಗಳ ಹಿಂದೆಯಷ್ಟೇ ಆಂಬುಲೆನ್ಸ್ ಒಂದಕ್ಕೆ ಈ ಗುಂಡಿಯಿಂದಾಗಿ ಪಲ್ಟಿಯಾಗುವ ಪರಿಸ್ಥಿತಿ ಎದುರಾಗಿತ್ತು! ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದೆ. ರಸ್ತೆ ದುರಸ್ತಿ ಮಾಡಲು ಇನ್ನೆಷ್ಟು ಬಾಳೆಗಿಡ ನೆಡಬೇಕು ಸ್ವಾಮಿ? ಬಲಿಪಶುವಾಗುವ ಮುನ್ನ ಅಧಿಕಾರಿಗಳೇ, ಈ ಮರಣಗುಂಡಿಗೆ ಕಾಯಂ ಮುಕ್ತಿ ನೀಡುವಿರಾ?







Comments