ರೀಲ್ಸ್ ಅಜ್ಜಿ' ಎಂದೇ ಖ್ಯಾತರಾಗಿದ್ದ ಉತ್ತರ ಕನ್ನಡದ ಲಕ್ಷ್ಮಿ ನಾಯ್ಕ 93ನೇ ವಯಸ್ಸಿನಲ್ಲಿ ನಿಧನ

ಉತ್ತರ ಕನ್ನಡ ಜಿಲ್ಲೆಯಲ್ಲಿ ‘ರೀಲ್ಸ್ ಅಜ್ಜಿ’ ಎಂದೇ ಖ್ಯಾತರಾಗಿದ್ದ ಲಕ್ಷ್ಮಿ ನಾಯ್ಕ (93) ಅವರು ಶನಿವಾರ ವಯೋಸಹಜ ಅನಾರೋಗ್ಯದಿಂದ ನಿಧನರಾದರು.
ಯಲ್ಲಾಪುರ ತಾಲೂಕಿನ ಕೆರೆಹೊಸಹಳ್ಳಿಯ ನಿವಾಸಿಯಾಗಿದ್ದ ಲಕ್ಷ್ಮಿ ನಾಯ್ಕ ಅವರು, ತಮ್ಮ ಮೊಮ್ಮಗ ಹಾಗೂ ಡ್ರಾಮಾ ಜೂನಿಯರ್ ಸ್ಪರ್ಧಿ ಸೂರಜ್ ಜೊತೆಗಿನ ರೀಲ್ಸ್‌ಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದರು. ಅವರ ಸರಳತೆ ಮತ್ತು ಸಹಜ ಅಭಿನಯ ಜನಮನ ಗೆದ್ದಿತ್ತು.

ಲಕ್ಷ್ಮಿ ನಾಯ್ಕ ಅವರ ನಿಧನವನ್ನು ಮೊಮ್ಮಗ ಸೂರಜ್ ಅವರು ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ದೃಢಪಡಿಸಿದ್ದಾರೆ. ಅವರ ಅಗಲಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ವ್ಯಕ್ತವಾಗುತ್ತಿದೆ.







Comments