ಚಿನ್ನ ಕಳ್ಳಸಾಗಣೆ ಪ್ರಕರಣ: ಒಂದು ವರ್ಷದ ಜೈಲುವಾಸದ ಬಳಿಕ ಇಂದು ನಟಿ ರನ್ಯಾ ರಾವ್ ಬಿಡುಗಡೆ

ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನಟಿ ರನ್ಯಾ ರಾವ್ ಅವರು ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಸುಮಾರು 102 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಿಸಿದ ಗಂಭೀರ ಆರೋಪ ಇವರ ಮೇಲಿತ್ತು.

ಹಿಂದೆಯೇ ಜಾಮೀನು ಸಿಕ್ಕಿದ್ದರೂ, 'ಕಾಫಿಪೋಸಾ' (COFEPOSA) ಕಾಯ್ದೆ ಜಾರಿಯಾಗಿದ್ದರಿಂದ ರನ್ಯಾ ಒಂದು ವರ್ಷ ಕಾಲ ಜೈಲುವಾಸ ಅನುಭವಿಸಬೇಕಾಯಿತು. ಕಳ್ಳಸಾಗಣೆ ತಡೆಗಟ್ಟುವ ಈ ಕಾಯ್ದೆಯಡಿ ಒಂದು ವರ್ಷದ ಅವಧಿ ಕಡ್ಡಾಯವಾಗಿತ್ತು.
ಇಂದಿಗೆ ಕಾಫಿಪೋಸಾ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ, ಕಾನೂನು ಪ್ರಕ್ರಿಯೆಗಳು ಮುಗಿದ ನಂತರ ಇಂದು ಸಂಜೆ ನಟಿ ಜೈಲಿನಿಂದ ಹೊರಬರಲಿದ್ದಾರೆ. ಇದರಿಂದ ಅವರ ಒಂದು ವರ್ಷದ ಸುದೀರ್ಘ ಸೆರೆವಾಸಕ್ಕೆ ಅಧಿಕೃತವಾಗಿ ತೆರೆ ಬೀಳಲಿದೆ.







Comments