ಪಿಯುಸಿ ಫಲಿತಾಂಶ: ಬಂಟ್ವಾಳದಲ್ಲಿ ತಾಯಿ-ಮಗಳ ಅಪರೂಪದ ಸಾಧನೆ!

ಬಂಟ್ವಾಳದ ಬಿ.ಸಿ. ರೋಡ್ ನಿವಾಸಿಗಳಾದ ನೇತ್ರಾವತಿ ಮತ್ತು ಅವರ ಪುತ್ರಿ ಹೇಮಶ್ರೀ ಒಂದೇ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಉತ್ತೀರ್ಣರಾಗುವ ಮೂಲಕ ಜಿಲ್ಲೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಗೃಹಿಣಿ ನೇತ್ರಾವತಿಯವರು ಶಿಕ್ಷಣ ಮುಂದುವರಿಸುವ ಹಂಬಲದಿಂದ ಪರೀಕ್ಷೆ ಬರೆದು ಯಶಸ್ವಿಯಾದರೆ, ಪುತ್ರಿ ಹೇಮಶ್ರೀ ಕಲಾ ವಿಭಾಗದಲ್ಲಿ 562 ಅಂಕಗಳನ್ನು ಗಳಿಸಿ ಬಿ. ಮೂಡ ಸರ್ಕಾರಿ ಕಾಲೇಜಿಗೆ 'ಟಾಪರ್' ಆಗಿ ಹೊರಹೊಮ್ಮಿದ್ದಾರೆ.

ಪತಿ ರವಿಕುಮಾರ್ ಮತ್ತು ಕಾಲೇಜಿನ ಉಪನ್ಯಾಸಕರ ಬೆಂಬಲದೊಂದಿಗೆ ತಾಯಿ-ಮಗಳು ಒಟ್ಟಾಗಿ ಸಾಧನೆ ಮಾಡಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಹಿರಿಯ ವಯಸ್ಸಿನಲ್ಲೂ ನೇತ್ರಾವತಿಯವರ ಕಲಿಯುವ ಆಸಕ್ತಿ ಮತ್ತು ಮಗಳ ಶೈಕ್ಷಣಿಕ ಸಾಧನೆ ಈ ಬಾರಿಯ ಫಲಿತಾಂಶದ ವಿಶೇಷತೆಯಾಗಿದೆ. ತಾಯಿ-ಮಗಳ ಈ ಜೋಡಿ ಈಗ ಎಲ್ಲರಿಗೂ ಸ್ಪೂರ್ತಿಯ ಸೆಲೆಯಾಗಿದೆ.







Comments