GATE ಉತ್ತೀರ್ಣರಿಗೆ ಕೇಂದ್ರದಲ್ಲಿ ಉದ್ಯೋಗಾವಕಾಶ: NIC ನಲ್ಲಿ 376 ಹುದ್ದೆಗಳಿಗೆ ಅರ್ಜಿ ಆಹ್ವಾನ
- Feb 12
- 1 min read

ನವದೆಹಲಿ: ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಮಾಹಿತಿ ಕೇಂದ್ರ (NIC) 376 ವೈಜ್ಞಾನಿಕ ಮತ್ತು ತಾಂತ್ರಿಕ ಸಹಾಯಕ ‘A’ (Scientific & Technical Assistant ‘A’) ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ತಾಂತ್ರಿಕ ಹಾಗೂ ಐಟಿ ಕ್ಷೇತ್ರದಲ್ಲಿ ಸರ್ಕಾರಿ ಸೇವೆಗೆ ಸೇರಲು ಬಯಸುವವರಿಗೆ ಇದು ಮಹತ್ವದ ಅವಕಾಶವಾಗಿದೆ.
ಈ ಹುದ್ದೆಗಳು ಗುಂಪು–ಬಿ, ನಾನ್-ಗೆಜೆಟೆಡ್ ಎಸ್ & ಟಿ ವರ್ಗಕ್ಕೆ ಸೇರಿದ್ದು, ದೇಶದ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ನಿಯೋಜಿಸಲಾಗುತ್ತದೆ. ಒಟ್ಟು 376 ಹುದ್ದೆಗಳ ಭರ್ತಿಗೆ ಅರ್ಜಿ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದೆ.
ಅರ್ಹತೆ ಏನು?
ಅಭ್ಯರ್ಥಿಗಳು ಎಂಎಸ್‌ಸಿ, ಎಂಎಸ್, ಎಂಸಿಎ, ಬಿಇ ಅಥವಾ ಬಿಟೆಕ್ ಪದವಿ ಹೊಂದಿರಬೇಕು. ಜೊತೆಗೆ 2024, 2025 ಅಥವಾ 2026ರಲ್ಲಿ ಪಡೆದ ಮಾನ್ಯ GATE ಅಂಕಗಳನ್ನು ಹೊಂದಿರುವುದು ಕಡ್ಡಾಯವಾಗಿದೆ.
ವರ್ಗವಾರು ಹುದ್ದೆಗಳ ಹಂಚಿಕೆ
UR – 154
SC – 56
ST – 28
OBC – 101
EWS – 37
ಅರ್ಜಿ ವಿಧಾನ
ಅರ್ಜಿ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್ ಮೂಲಕ ನಡೆಯಲಿದೆ. GATE 2026 ಫಲಿತಾಂಶ ಪ್ರಕಟವಾದ ದಿನಾಂಕದಿಂದ 10 ದಿನಗಳೊಳಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಈ ಕುರಿತು ಕಿರು ಅಧಿಸೂಚನೆ NIC ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿದ್ದು, ಶೀಘ್ರದಲ್ಲೇ ವಿವರವಾದ ಅಧಿಸೂಚನೆ ಬಿಡುಗಡೆಯಾಗಲಿದೆ. ಅಭ್ಯರ್ಥಿಗಳು ನಿಯಮಿತವಾಗಿ ಅಧಿಕೃತ ವೆಬ್‌ಸೈಟ್ ಪರಿಶೀಲಿಸುವುದು ಒಳಿತು.
ವೇತನ ಮತ್ತು ಸೌಲಭ್ಯ
ಆಯ್ಕೆಯಾದ ಅಭ್ಯರ್ಥಿಗಳಿಗೆ ಪೇ ಲೆವೆಲ್-6 ಅನ್ವಯ ತಿಂಗಳಿಗೆ ₹35,400 ರಿಂದ ₹1,12,400ರವರೆಗೆ ಸಂಬಳ ನೀಡಲಾಗುತ್ತದೆ. ಜೊತೆಗೆ ಇತರ ಕೇಂದ್ರ ಸರ್ಕಾರಿ ಭತ್ಯೆಗಳು ಮತ್ತು ಸೌಲಭ್ಯಗಳೂ ಲಭ್ಯವಿರುತ್ತವೆ.






Comments