ರಾಜ್ಯದಲ್ಲಿ ಹೊಸ ಮದ್ಯ ನೀತಿ ಜಾರಿ: ಕ್ವಾರ್ಟರ್ ಬಾಟಲಿ ಬೆಲೆ ಏರಿಕೆ

ಕರ್ನಾಟಕದ ನೂತನ ಅಬಕಾರಿ ನೀತಿ ಮೇ 11ರಿಂದ ಅಧಿಕೃತವಾಗಿ ಜಾರಿಗೆ ಬಂದಿದ್ದು, ದಶಕಗಳ ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲಾಗಿದೆ. ಮದ್ಯದಲ್ಲಿನ ಆಲ್ಕೋಹಾಲ್ ಪ್ರಮಾಣಕ್ಕೆ ಅನುಗುಣವಾಗಿ ತೆರಿಗೆ ವಿಧಿಸುವ ಈ ಮಾದರಿಯನ್ನು ಅಳವಡಿಸಿಕೊಂಡ ದೇಶದ ಮೊದಲ ರಾಜ್ಯ ಕರ್ನಾಟಕವಾಗಿದೆ.
ಈ ಹೊಸ ನೀತಿಯಿಂದಾಗಿ ಸಾಮಾನ್ಯ ಜನರು ಬಳಸುವ ವಿಸ್ಕಿ, ರಮ್ ಮತ್ತು ಬ್ರಾಂಡಿಗಳ ಬೆಲೆ ಶೇ 20 ರಿಂದ 30ರಷ್ಟು ಏರಿಕೆಯಾಗಲಿದೆ. ಪ್ರಮುಖವಾಗಿ 180 ಮಿ.ಲೀ ಕ್ವಾರ್ಟರ್ ಬಾಟಲಿಗಳ ಬೆಲೆ ಗಣನೀಯವಾಗಿ ಹೆಚ್ಚಲಿದ್ದು, ಕಡಿಮೆ ಆದಾಯ ವರ್ಗದ ಗ್ರಾಹಕರಿಗೆ ಆರ್ಥಿಕ ಹೊರೆಯಾಗಲಿದೆ.
ಮತ್ತೊಂದೆಡೆ, ಪ್ರೀಮಿಯಂ ಮತ್ತು ವಿದೇಶಿ ಬ್ರಾಂಡ್‌ಗಳ ಮದ್ಯದ ಬೆಲೆ ಶೇ 16 ರಿಂದ 20ರಷ್ಟು ಇಳಿಕೆಯಾಗಲಿದೆ. ತೆರಿಗೆ ಸ್ಲ್ಯಾಬ್‌ಗಳನ್ನು 16ರಿಂದ 8ಕ್ಕೆ ಇಳಿಸಿರುವುದು ಬಹುರಾಷ್ಟ್ರೀಯ ಕಂಪನಿಗಳಿಗೆ ವರದಾನವಾದರೆ, ಸ್ಥಳೀಯ ಮತ್ತು ಸಣ್ಣ ಮದ್ಯ ತಯಾರಿಕಾ ಘಟಕಗಳಿಗೆ ಮಾರುಕಟ್ಟೆಯಲ್ಲಿ ಹಿನ್ನಡೆಯಾಗುವ ಭೀತಿ ಎದುರಾಗಿದೆ.







Comments