ಹೆಚ್ಚು ಮಕ್ಕಳನ್ನು ಹೆತ್ತರೆ ಪ್ರೋತ್ಸಾಹ ಧನ: ಆಂಧ್ರ ಸಿಎಂ ಘೋಷಣೆ
- May 18
- 1 min read

ಆಂಧ್ರಪ್ರದೇಶದಲ್ಲಿ ಜನಸಂಖ್ಯೆ ಇಳಿಕೆಯನ್ನು ತಡೆಯಲು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಭರ್ಜರಿ ಕೊಡುಗೆ ಘೋಷಿಸಿದ್ದಾರೆ. ರಾಜ್ಯದಲ್ಲಿ ಮೂರನೇ ಮಗುವಿಗೆ ₹30,000 ಹಾಗೂ ನಾಲ್ಕನೇ ಮಗುವಿನ ಜನನಕ್ಕೆ ₹40,000 ಪ್ರೋತ್ಸಾಹ ಧನ ನೀಡುವುದಾಗಿ ಶನಿವಾರ ಶ್ರೀಕಾಕುಳಂ ಜಿಲ್ಲೆಯ ಸಾರ್ವಜನಿಕ ಸಭೆಯಲ್ಲಿ ಅವರು ಪ್ರಕಟಿಸಿದ್ದಾರೆ.
ಈ ಹಿಂದೆ ಮಾರ್ಚ್ 5 ರಂದು ವಿಧಾನಸಭೆಯಲ್ಲಿ ಎರಡನೇ ಮಗು ಹೊಂದುವ ದಂಪತಿಗೆ ₹25,000 ನೀಡುವುದಾಗಿ ನಾಯ್ಡು ಘೋಷಿಸಿದ್ದರು. ಇದೀಗ ಅದರ ಮುಂದುವರಿದ ಭಾಗವಾಗಿ ಮೂರು ಮತ್ತು ನಾಲ್ಕನೇ ಮಗುವಿಗೂ ಆರ್ಥಿಕ ನೆರವು ವಿಸ್ತರಿಸುವ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಕರ್ನಾಟಕದ ನೆರೆರಾಜ್ಯವಾದ ಆಂಧ್ರಪ್ರದೇಶದ ಈ ವಿಶಿಷ್ಟ ಕ್ರಮವು ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ. ಜನಸಂಖ್ಯಾ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಈ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಸಿಎಂ ನಾಯ್ಡು ಸ್ಪಷ್ಟಪಡಿಸಿದ್ದಾರೆ.







Comments