ಔಷಧಿ ಬೆಲೆ ಇಳಿಕೆ: ಬಡ, ಮಧ್ಯಮ ವರ್ಗದವರಿಗೆ ಕೇಂದ್ರದ ಸಿಹಿ ಸುದ್ದಿ!
- 5 days ago
- 1 min read

ಪ್ರತಿ ತಿಂಗಳು ಔಷಧಿಗಳಿಗೆ ಸಾವಿರಾರು ರೂಪಾಯಿ ವೆಚ್ಚ ಮಾಡುತ್ತಿರುವ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಸೇರಿದಂತೆ ವಿವಿಧ ದೀರ್ಘಕಾಲೀನ ಕಾಯಿಲೆಗಳಿಗೆ ಬಳಸುವ ಒಟ್ಟು 39 ಅಗತ್ಯ ಔಷಧಿಗಳ ಚಿಲ್ಲರೆ ಬೆಲೆಗೆ ಗರಿಷ್ಠ ಮಿತಿಯನ್ನು ನಿಗದಿಪಡಿಸಿ ರಾಷ್ಟ್ರೀಯ ಔಷಧ ದರ ನಿಯಂತ್ರಣ ಪ್ರಾಧಿಕಾರ (NPPA) ಮಹತ್ವದ ಆದೇಶ ಹೊರಡಿಸಿದೆ.
ಈ ಹೊಸ ನಿಯಮವನ್ನು ಡ್ರಗ್ಸ್ ಆದೇಶ–2013 (DPCO) ಅಡಿಯಲ್ಲಿ ಜಾರಿಗೆ ತರಲಾಗಿದ್ದು, ಔಷಧ ಕಂಪನಿಗಳು ಇನ್ನು ಮುಂದೆ ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವಂತಿಲ್ಲ. ಇದರೊಂದಿಗೆ, ಹಿರಿಯ ನಾಗರಿಕರಿಗೆ ಅಗತ್ಯವಿರುವ ಕ್ಯಾಲ್ಸಿಯಂ ಮತ್ತು ವಿಟಮಿನ್-D3 ಮಾತ್ರೆಯ ಬೆಲೆಯನ್ನು ಪ್ರತಿ ಮಾತ್ರೆಗೆ 8.93 ರೂ. ಹಾಗೂ ತುರ್ತು ಚಿಕಿತ್ಸೆಯ ಆ್ಯಂಟಿ-ರೇಬೀಸ್ ಇಮ್ಯುನೊಗ್ಲೋಬುಲಿನ್ ಇಂಜೆಕ್ಷನ್ ದರವನ್ನು 119.48 ರೂ.ಗೆ ಪರಿಷ್ಕರಿಸಿ ಆದೇಶಿಸಲಾಗಿದೆ.
ಜೀವಮಾನವಿಡೀ ಔಷಧಿ ಸೇವಿಸಬೇಕಾದ ರೋಗಿಗಳಿಗೆ, ನಿವೃತ್ತರಿಗೆ ಹಾಗೂ ಹಿರಿಯ ನಾಗರಿಕರಿಗೆ ಈ ನಿರ್ಧಾರದಿಂದ ತಿಂಗಳ ವೆಚ್ಚದಲ್ಲಿ ಗಮನಾರ್ಹ ಉಳಿತಾಯವಾಗಲಿದೆ. ಔಷಧ ಕಂಪನಿಗಳು ತಮ್ಮ ಪ್ಯಾಕ್‌ಗಳ ಮೇಲಿನ ಗರಿಷ್ಠ ಚಿಲ್ಲರೆ ಬೆಲೆಯನ್ನು (MRP) ಕೂಡಲೇ ಪರಿಷ್ಕರಿಸುವಂತೆ ಸೂಚನೆ ನೀಡಲಾಗಿದ್ದು, ಇದು ಜನಸಾಮಾನ್ಯರ ಆರ್ಥಿಕ ಹೊರೆಯನ್ನು ತುಸು ತಗ್ಗಿಸಲಿದೆ.







Comments