ಮಂಗಳೂರು ರೈಲ್ವೆ ವಲಯದಲ್ಲಿ ಬೃಹತ್ ಅಭಿವೃದ್ಧಿ: ಸಚಿವ ವಿ. ಸೋಮಣ್ಣ

ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲೇ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ರೈಲು ನಿಲ್ದಾಣ ನಿರ್ಮಿಸಲು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ಸಂಸದ ಬ್ರಿಜೇಶ್ ಚೌಟ ಅವರ ಪ್ರಸ್ತಾವನೆಯಂತೆ ಈ ಯೋಜನೆಯ ಅಧ್ಯಯನ ಆರಂಭವಾಗಿದೆ.
ಇದೇ ವೇಳೆ ಕರಾವಳಿ ಜನರ ಬಹುದಿನಗಳ ಕನಸಾದ ಮಂಗಳೂರು–ಬೆಂಗಳೂರು 'ವಂದೇ ಭಾರತ್ ಎಕ್ಸ್‌ಪ್ರೆಸ್' ರೈಲು ಸಂಚಾರ ಇನ್ನು ಒಂದು ತಿಂಗಳೊಳಗೆ ಅಧಿಕೃತವಾಗಿ ಪ್ರಾರಂಭವಾಗಲಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.
ಹಾಸನ-ಮಂಗಳೂರು ಘಾಟ್ ಮಾರ್ಗದ ವಿದ್ಯುದೀಕರಣ ಪೂರ್ಣಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಈ ಹೈಸ್ಪೀಡ್ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಇದು ಎಲ್ಲ ಪ್ರಮುಖ ನಿಲ್ದಾಣಗಳಲ್ಲಿ ನಿಲ್ಲಲಿದೆ.







Comments