ಮನ್ ಕೀ ಬಾತ್: ಕರ್ನಾಟಕದ ನಿಂಗಮ್ಮ, ಚಿಕ್ಕಮಗಳೂರಿನ ರೈತರ ಸಾಧನೆಗೆ ಪ್ರಧಾನಿ ಮೋದಿ ಶ್ಲಾಘನೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ‘ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ದೇಶದ ನವೀನ ಆಲೋಚನೆಗಳು ಹಾಗೂ ಕರ್ನಾಟಕದ ಯಶೋಗಾಥೆಗಳನ್ನು ವಿಶೇಷವಾಗಿ ಪ್ರಸ್ತಾಪಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಪಿಎಂ ಸ್ವನಿಧಿ’ ಯೋಜನೆಯಡಿ ಸಾಲ ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಂಡ ಬೆಂಗಳೂರಿನ ಬೀದಿಬದಿ ವ್ಯಾಪಾರಿ ನಿಂಗಮ್ಮ ಅವರ ಸಾಧನೆಯನ್ನು ಮೋದಿ ಶ್ಲಾಘಿಸಿದರು. ಹಾಗೆಯೇ, ಕಾಫಿ ತೋಟಗಳ ನಡುವೆ ಪರ್ಯಾಯ ಬೆಳೆಯಾಗಿ ಅವಕಾಡೊ ಬೆಳೆದು ಯಶಸ್ಸು ಕಂಡ ಚಿಕ್ಕಮಗಳೂರಿನ ರೈತರ ನೂತನ ಕೃಷಿ ಪದ್ಧತಿಯನ್ನು ಪ್ರಶಂಸಿದರು.
ಭಾರತದ ರಾಜವಂಶಗಳ ಇತಿಹಾಸ ತಿಳಿಸುವ ‘Bharat Rajya’ ವೆಬ್‌ಸೈಟ್, ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣದ ಅಗತ್ಯ ಹಾಗೂ ‘ಹರ್ ಘರ್ ತಿರಂಗಾ’ ಅಭಿಯಾನದಲ್ಲಿ 8 ಕೋಟಿ ಸೆಲ್ಫಿ ಅಪ್‌ಲೋಡ್ ಆದ ಯಶಸ್ಸನ್ನು ಮೋದಿ ಉಲ್ಲೇಖಿಸಿದರು. ಜೊತೆಗೆ ‘ಮಿಷನ್ ಶಕ್ತಿ ಸ್ಯಾಟ್’ ಅಡಿಯಲ್ಲಿ ಉಪಗ್ರಹ ನಿರ್ಮಿಸುತ್ತಿರುವ ಉತ್ತರ ಪ್ರದೇಶದ 100 ವಿದ್ಯಾರ್ಥಿನಿಯರ ಸಾಧನೆಯನ್ನು ಹೆಮ್ಮೆಯಿಂದ ಹಂಚಿಕೊಂಡರು.







Comments