ಎಲ್‌ಪಿಜಿ ಬುಕ್ಕಿಂಗ್ ಅವಧಿ 25 ದಿನಕ್ಕೆ ಏರಿಕೆ
- Mar 10
- 1 min read

ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಕೃತಕ ಅಭಾವ ಹಾಗೂ ಕಾಳಸಂತೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಗ್ಯಾಸ್ ಸಿಲಿಂಡರ್‌ಗಳ ಅಕ್ರಮ ದಾಸ್ತಾನು ತಡೆಯಲು ಎರಡು ಬುಕ್ಕಿಂಗ್‌ಗಳ ನಡುವಿನ ಕನಿಷ್ಠ ಅವಧಿಯನ್ನು 21 ದಿನಗಳಿಂದ 25 ದಿನಗಳಿಗೆ ಹೆಚ್ಚಿಸಿ ಹೊಸ ಮಾರ್ಗಸೂಚಿ ಪ್ರಕಟಿಸಿದೆ.

ಯುದ್ಧದ ಭೀತಿಯಿಂದಾಗಿ ಜನರು ಮುನ್ನೆಚ್ಚರಿಕೆಯಾಗಿ ಕೇವಲ 15 ದಿನಗಳ ಅಂತರದಲ್ಲೇ ಸಿಲಿಂಡರ್ ಕಾಯ್ದಿರಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಹಿಂದೆ ಗ್ರಾಹಕರು ಸರಾಸರಿ 55 ದಿನಗಳಿಗೊಮ್ಮೆ ಬುಕ್ ಮಾಡುತ್ತಿದ್ದರು. ಆದರೆ ಈಗಿನ ಅನಗತ್ಯ ಆತುರವು ಪೂರೈಕೆಯ ಮೇಲೆ ಒತ್ತಡ ಹೇರುತ್ತಿದೆ.
ಸಿಲಿಂಡರ್‌ಗಳ ದುರ್ಬಳಕೆ ತಡೆಯಲು ಮತ್ತು ನಿಜವಾದ ಅಗತ್ಯವಿರುವವರಿಗೆ ಸಕಾಲದಲ್ಲಿ ಗ್ಯಾಸ್ ತಲುಪಿಸಲು ಈ ಹೊಸ ನಿಯಮ ಸಹಕಾರಿಯಾಗಲಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಇಲಾಖೆ ಎಚ್ಚರಿಸಿದೆ.







Comments