ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ: ದರ್ಶನದ ಅವಧಿ ವಿಸ್ತರಣೆ
- May 14
- 1 min read

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಹಿತದೃಷ್ಟಿಯಿಂದ ದೇವಸ್ಥಾನದ ಆಡಳಿತ ಮಂಡಳಿಯು ದರ್ಶನದ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಇನ್ಮುಂದೆ ಭಕ್ತರಿಗೆ ಪ್ರತಿದಿನ ದೇವರ ದರ್ಶನಕ್ಕಾಗಿ ಒಂದು ಗಂಟೆ ಹೆಚ್ಚುವರಿ ಸಮಯ ಲಭ್ಯವಾಗಲಿದೆ.
ಈ ಹಿಂದೆ ಮಧ್ಯಾಹ್ನ 1:30 ರಿಂದ 3:30 ರವರೆಗೆ ದರ್ಶನ ಸ್ಥಗಿತಗೊಳಿಸಲಾಗುತ್ತಿತ್ತು. ಆದರೆ ಪರಿಷ್ಕೃತ ನಿಯಮದಂತೆ, ಮಧ್ಯಾಹ್ನ 2:00 ರಿಂದ 3:00 ಗಂಟೆಯವರೆಗೆ ಮಾತ್ರ ವಿರಾಮ ಇರಲಿದ್ದು, ಉಳಿದ ಅವಧಿಯಲ್ಲಿ ಸತತವಾಗಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಬೆಳಿಗ್ಗೆ 6:30 ರಿಂದ ಮಧ್ಯಾಹ್ನ 2:00 ರವರೆಗೆ ಹಾಗೂ ಅಪರಾಹ್ನ 3:00 ರಿಂದ ರಾತ್ರಿ 8:30 ರವರೆಗೆ ಭಕ್ತರು ದೇವರ ದರ್ಶನ ಪಡೆಯಬಹುದು. ಮೇ 10 ರಿಂದಲೇ ಈ ನೂತನ ವ್ಯವಸ್ಥೆ ಜಾರಿಗೆ ಬಂದಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಚಾಡಿ ತಿಳಿಸಿದ್ದಾರೆ.







Comments