ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೈಟೆಕ್ ಸ್ಪರ್ಶ: 1,000ಕ್ಕೂ ಹೆಚ್ಚು ಹೊಸ ಕೊಠಡಿಗಳ ನಿರ್ಮಾಣ!

ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಶೀಘ್ರದಲ್ಲೇ ಹೈಟೆಕ್ ಸ್ಪರ್ಶ ಸಿಗಲಿದೆ. ಭಕ್ತರ ಅನುಕೂಲಕ್ಕಾಗಿ 1,000ಕ್ಕೂ ಹೆಚ್ಚು ಅತ್ಯಾಧುನಿಕ ಕೊಠಡಿಗಳನ್ನು ನಿರ್ಮಿಸಲು ಸರ್ಕಾರ ಬೃಹತ್ ಯೋಜನೆ ರೂಪಿಸಿದೆ. ಇದರೊಂದಿಗೆ ಕ್ಷೇತ್ರಕ್ಕೆ ಬರುವ ಯಾತ್ರಾರ್ಥಿಗಳಿಗೆ ಉಳಿದುಕೊಳ್ಳಲು ಇನ್ನು ಮುಂದೆ ಸುಸಜ್ಜಿತ ವಸತಿ ಸೌಕರ್ಯಗಳು ಲಭ್ಯವಾಗಲಿವೆ.
ವಸತಿಗೃಹಗಳ ಜೊತೆಗೆ, 77.25 ಕೋಟಿ ರೂ. ವೆಚ್ಚದಲ್ಲಿ ಏಕಕಾಲಕ್ಕೆ 6,000 ಭಕ್ತರು ಊಟ ಮಾಡಬಹುದಾದ 'ಜಿ+2' ಮಾದರಿಯ ಬೃಹತ್ ಅನ್ನದಾಸೋಹ ಭವನ ನಿರ್ಮಾಣವಾಗಲಿದೆ. ಹಾಗೆಯೇ, 47.5 ಕೋಟಿ ರೂ. ವೆಚ್ಚದಲ್ಲಿ ಪಾರಂಪರಿಕ ಶೈಲಿಯ ರಥಬೀದಿ ನವೀಕರಣ ಹಾಗೂ 82 ಕೋಟಿ ರೂ. ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ ತಲೆಎತ್ತಲಿದೆ.
ಲೋಕೋಪಯೋಗಿ ಇಲಾಖೆಯ ಮೂಲಕ ಈ ಎಲ್ಲಾ ಕಾಮಗಾರಿಗಳು ನಡೆಯಲಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. ಮುಂದಿನ ಎರಡು ವರ್ಷಗಳ ಒಳಗಾಗಿ ಈ ಎಲ್ಲಾ ನೂತನ ಯೋಜನೆಗಳು ಪೂರ್ಣಗೊಂಡು ಭಕ್ತರ ಸೇವೆಗೆ ಮುಕ್ತವಾಗಲಿವೆ ಎಂದು ಸಚಿವರು ಭರವಸೆ ನೀಡಿದ್ದಾರೆ.







Comments