ಕತಾರ್ ಅನಿಲ ತಾಣದ ಮೇಲೆ ದಾಳಿ: ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತಲ್ಲಣ

ಕತಾರ್‌ನ ಲಾಸ್ ರಫನ್ LNG ತಾಣದ ಮೇಲೆ ಇರಾನ್ ನಡೆಸಿದ ದಾಳಿಯು ಜಾಗತಿಕ ಅನಿಲ ಮಾರುಕಟ್ಟೆಯಲ್ಲಿ ಭಾರೀ ಆತಂಕ ಸೃಷ್ಟಿಸಿದೆ. ವಿಶ್ವದ ಒಟ್ಟು LNG ಪೂರೈಕೆಯಲ್ಲಿ ಶೇ. 25ರಷ್ಟು ಪಾಲು ಹೊಂದಿರುವ ಈ ಕೇಂದ್ರದ ಮೇಲಿನ ಅಡಚಣೆಯಿಂದಾಗಿ ಅನಿಲ ಕೊರತೆ ಮತ್ತು ಸರಬರಾಜು ವಿಳಂಬವಾಗಲಿದೆ. ಇದರಿಂದ ಅನಿಲ ಬೆಲೆಗಳು ಗಣನೀಯವಾಗಿ ಏರಿಕೆಯಾಗಲಿದ್ದು, ವಿಶೇಷವಾಗಿ ನಾರ್ಡ್ ಸ್ಟ್ರೀಮ್ ಪೈಪ್‌ಲೈನ್ ನಾಶದ ನಂತರ LNG ಮೇಲೆ ಹೆಚ್ಚು ಅವಲಂಬಿತವಾಗಿರುವ ಜರ್ಮನಿ ಸೇರಿದಂತೆ ಯುರೋಪಿಯನ್ ರಾಷ್ಟ್ರಗಳಿಗೆ ದೊಡ್ಡ ಹೊಡೆತ ಬೀಳಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಈ ಬಿಕ್ಕಟ್ಟಿನಿಂದಾಗಿ ಭಾರತ, ಜಪಾನ್ ಮತ್ತು ತುರ್ಕಿಯೆ ಸೇರಿದಂತೆ ಹಲವು ರಾಷ್ಟ್ರಗಳ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಕೈಗಾರಿಕಾ ವೆಚ್ಚಗಳು ಹೆಚ್ಚಾಗುವುದರಿಂದ ಜಾಗತಿಕ ಹಣದುಬ್ಬರ ಏರಿಕೆಯಾಗುವ ಭೀತಿ ಎದುರಾಗಿದೆ. ದುರ್ಬಲ ಆರ್ಥಿಕತೆ ಹೊಂದಿರುವ ಸಣ್ಣ ದೇಶಗಳು ಅತಿ ಹೆಚ್ಚು ಸಂಕಷ್ಟಕ್ಕೆ ಸಿಲುಕಲಿದ್ದು, ಅನಿಲ ಬೆಲೆ ಏರಿಕೆಯಿಂದಾಗಿ ಉತ್ಪಾದನಾ ವಲಯವು ಕುಂಠಿತಗೊಳ್ಳಬಹುದು. ಈ ಪರಿಸ್ಥಿತಿಯು ಅನೇಕ ಕೈಗಾರಿಕೆಗಳು ಪರ್ಯಾಯ ಇಂಧನಗಳತ್ತ ಮುಖಮಾಡುವಂತೆ ಮಾಡಬಹುದು ಮತ್ತು ಜಾಗತಿಕ ಮಾರುಕಟ್ಟೆಯನ್ನು ನಿಶ್ಚಲಗೊಳಿಸಬಹುದು ಎಂದು ಅಂತರರಾಷ್ಟ್ರೀಯ ವ್ಯವಹಾರ ಪ್ರಾಧ್ಯಾಪಕ ಬಬಾಕ್ ಹಫೆಜಿ ತಿಳಿಸಿದ್ದಾರೆ.







Comments