ಗ್ರಾಹಕರಿಗೆ ಬಿಗ್ ಶಾಕ್: ಅಕ್ಕಿ ದರ ದಿಢೀರ್ ಏರಿಕೆ, ಕ್ವಿಂಟಲ್‌ಗೆ ₹1,000ವರೆಗೆ ಹೆಚ್ಚಳ!

ರಾಜ್ಯದಲ್ಲಿ ಮಳೆ ಕೊರತೆ, ಭತ್ತದ ಇಳುವರಿ ಕುಸಿತ ಹಾಗೂ ಅಕ್ಕಿ ಗಿರಣಿಗಳಲ್ಲಿನ ದಾಸ್ತಾನು ಕೊರತೆಯ ಪರಿಣಾಮ ಅಕ್ಕಿ ದರ ದಿಢೀರ್ ಏರಿಕೆಯಾಗಿದೆ. ಹಲವು ವಿಧದ ಅಕ್ಕಿಯ ಬೆಲೆ ಕ್ವಿಂಟಲ್‌ಗೆ ಸರಾಸರಿ ₹1,000ವರೆಗೆ ಹೆಚ್ಚಳವಾಗಿದ್ದು, ಗ್ರಾಹಕರಿಗೆ ಮತ್ತಷ್ಟು ಬೆಲೆ ಏರಿಕೆಯ ಬಿಸಿ ತಟ್ಟಿದೆ.
ಮಳೆ ಕೊರತೆ, ಇಳುವರಿ ಕುಸಿತದಿಂದ ಅಕ್ಕಿ ಬೆಲೆ ಏರಿಕೆ
ಕರ್ನಾಟಕದಲ್ಲಿ ಮಳೆ ಕೊರತೆಯ ಪರಿಣಾಮ ಭತ್ತದ ಬೆಳೆಗೆ ಹೊಡೆತ ಬಿದ್ದಿದೆ. ಸಮರ್ಪಕವಾಗಿ ಬಿತ್ತನೆ ನಡೆಯದಿರುವುದು, ಜಲಾಶಯಗಳಲ್ಲಿ ನೀರಿನ ಕೊರತೆ ಹಾಗೂ ಕಾಲುವೆಗಳ ಮೂಲಕ ನೀರು ಹರಿಸಲು ಸಾಧ್ಯವಾಗದಿರುವುದರಿಂದ ಹಲವು ಪ್ರದೇಶಗಳಲ್ಲಿ ಭತ್ತದ ಬೆಳೆ ಕುಂಠಿತವಾಗಿದೆ.
ಇದರ ಪರಿಣಾಮ ಭತ್ತದ ಇಳುವರಿ ಕಡಿಮೆಯಾಗುವ ನಿರೀಕ್ಷೆ ಎದುರಾಗಿದ್ದು, ಅಕ್ಕಿ ಗಿರಣಿಗಳಲ್ಲಿಯೂ ದಾಸ್ತಾನು ಕೊರತೆ ಕಂಡುಬಂದಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ಏರಿಕೆಯಾಗುತ್ತಿದೆ.
ಯಾವ ಅಕ್ಕಿಯ ಬೆಲೆ ಎಷ್ಟು?
ಪ್ರಸ್ತುತ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಅಕ್ಕಿಯ ಕ್ವಿಂಟಲ್ ದರ ಈ ಕೆಳಗಿನಂತಿದೆ:
ಹಳೆ ಸೋನಾ ಮಸೂರಿ: ₹6,600
ಕಾವೇರಿ ಸೋನಾ: ₹6,250
ಆರ್.ಎನ್.ಆರ್. ಸೋನಾ: ₹6,450
ಹಳೆ ಆರ್.ಎನ್.ಆರ್. ಸೋನಾ ರಾ ರೈಸ್: ₹6,700
ಬಾಯ್ಲ್ಡ್ ರೈಸ್: ₹6,100
ಕೋಲಂ ರೈಸ್: ₹7,500
ಮಾರುಕಟ್ಟೆಯಲ್ಲಿ ಸದ್ಯ ಬಹುತೇಕ ಎಲ್ಲಾ ವಿಧದ ಅಕ್ಕಿಯ ದರದಲ್ಲಿ ಕ್ವಿಂಟಲ್‌ಗೆ ಸರಾಸರಿ ₹1,000ರಷ್ಟು ಏರಿಕೆ ಕಂಡುಬಂದಿದೆ ಎಂದು ವರದಿಯಾಗಿದೆ.
ಗ್ರಾಹಕರಿಗೆ ಹೆಚ್ಚುವರಿ ಹೊರೆ
ಭತ್ತದ ಉತ್ಪಾದನೆ ಕಡಿಮೆಯಾಗುವ ಸಾಧ್ಯತೆ ಹಾಗೂ ದಾಸ್ತಾನು ಕೊರತೆಯಿಂದ ಮುಂದಿನ ದಿನಗಳಲ್ಲಿ ಅಕ್ಕಿಯ ಬೆಲೆಯಲ್ಲಿw ಮತ್ತಷ್ಟು ಏರಿಕೆಯಾಗುವ ಆತಂಕವೂ ಎದುರಾಗಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಗ್ರಾಹಕರಿಗೆ ಅಕ್ಕಿ ದರ ಹೆಚ್ಚಳ ಮತ್ತೊಂದು ಹೊರೆ ತಂದಿದೆ.







Comments