ಕಾಮನ್ವೆಲ್ತ್ ಗೇಮ್ಸ್ 2026: ಉದ್ಘಾಟನೆಗೂ ಮುನ್ನವೇ ಭಾರತಕ್ಕೆ ಒಲಿದ ಮೊದಲ ಪದಕ!

2026ರ ಗ್ಲಾಸ್ಗೋ ಕಾಮನ್ವೆಲ್ತ್ ಗೇಮ್ಸ್ ಅಧಿಕೃತವಾಗಿ ಉದ್ಘಾಟನೆಗೊಳ್ಳುವ ಮುನ್ನವೇ ಭಾರತ ತನ್ನ ಪದಕದ ಖಾತೆಯನ್ನು ತೆರೆದಿದೆ. ಪ್ರಮುಖ ಕ್ರೀಡೆಗಳ ಕಡಿತದ ನಡುವೆಯೂ 124 ಕ್ರೀಡಾಪಟುಗಳೊಂದಿಗೆ ಕಣಕ್ಕಿಳಿದಿರುವ ಭಾರತೀಯ ತಂಡಕ್ಕೆ ಈ ಸುದ್ದಿ ದೊಡ್ಡ ಆಶಾಭಾವನೆ ತಂದಿದೆ.
ಮಹಿಳೆಯರ 75 ಕೆಜಿ ಬಾಕ್ಸಿಂಗ್ ವಿಭಾಗದಲ್ಲಿ ಒಲಿಂಪಿಕ್ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್ ‘ಬೈ’ (Bye) ಪಡೆಯುವ ಮೂಲಕ ನೇರವಾಗಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಬಾಕ್ಸಿಂಗ್ ನಿಯಮಗಳ ಪ್ರಕಾರ ಸೆಮಿಫೈನಲ್ ತಲುಪಿದ ಸ್ಪರ್ಧಿಗಳಿಗೆ ಕನಿಷ್ಠ ಕಂಚಿನ ಪದಕ ಖಾತರಿಯಾಗುವುದರಿಂದ, ಭಾರತಕ್ಕೆ ಮೊದಲ ಪದಕ ನಿಶ್ಚಿತವಾಗಿದೆ.

ಈ ವಿಭಾಗದಲ್ಲಿ ಒಟ್ಟು 5 ಸ್ಪರ್ಧಿಗಳಿದ್ದು, ಅದೃಷ್ಟವಶಾತ್ ಲವ್ಲಿನಾಗೆ ಅಂತಿಮ-4ರ ಸುತ್ತಿಗೆ ನೇರ ಪ್ರವೇಶ ಸಿಕ್ಕಿದೆ. ಜುಲೈ 31ರಂದು ನಡೆಯಲಿರುವ ಸೆಮಿಫೈನಲ್ನಲ್ಲಿ ಅವರು ಟುವಾಲು ದೇಶದ ಟಿಕೆಬಿಪಿ ಟಾಫಕಿ ವಿರುದ್ಧ ಸೆಣಸಲಿದ್ದು, ಗೆದ್ದರೆ ಫೈನಲ್ ಪ್ರವೇಶಿಸಲಿದ್ದಾರೆ.







Comments