ಕಡಬ: ಪ.ಪಂ ಅಧ್ಯಕ್ಷೆಯ ಮನೆಯಲ್ಲೇ ಕಳ್ಳತನ

ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಅಡ್ಡಗದ್ದೆ ಎಂಬಲ್ಲಿ ಮನೆಯ ಮರದ ಬಾಕ್ಸ್ ಒಡೆದು ಅದರಲ್ಲಿದ್ದ ₹84,800/- ನಗದು ಹಣವನ್ನು ಕಳ್ಳರು ದೋಚಿರುವ ಘಟನೆ ನಡೆದಿದೆ. ಕಡಬ ಪಟ್ಟಣ ಪಂಚಾಯತ್ ಅಧ್ಯಕ್ಷೆ ತಮನ್ನಾ ಜಬೀನ್ (43) ಅವರ ಮನೆಯಲ್ಲಿ ಈ ಕಳವು ಸಂಭವಿಸಿದ್ದು, ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರೆ ತಮನ್ನಾ ಜಬೀನ್ ಅವರು ಕುಟುಂಬದೊಂದಿಗೆ ಕಡಬ ಅಡ್ಡಗದ್ದೆಯಲ್ಲಿರುವ ಗಂಡನ ಮನೆಯಲ್ಲಿ ವಾಸವಾಗಿದ್ದು, ಮಲಗುವ ಕೋಣೆಯ ಮರದ ಬಾಕ್ಸ್‌ನಲ್ಲಿ ಹಣ ಸಂಗ್ರಹಿಸಿಟ್ಟಿದ್ದರು. ಆಗಸ್ಟ್ 18 ರಂದು ಕಾರ್ಯಕ್ರಮ ನಿಮಿತ್ತ ಕುಟುಂಬ ಸಮೇತ ಉಡುಪಿಗೆ ತೆರಳಿ ಅಂದೇ ಮನೆಗೆ ಹಿಂತಿರುಗಿದ್ದರು. ಬಳಿಕ ಆಗಸ್ಟ್ 24 ರಂದು ಬಾಕ್ಸ್‌ನಿಂದ ಹಣ ತೆಗೆಯಲು ಹೋದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಮರದ ಬಾಕ್ಸ್ ಅನ್ನು ಬಲವಂತವಾಗಿ ಒಡೆದು ಅದರಲ್ಲಿದ್ದ ಒಟ್ಟು ₹84,800 ಹಣವನ್ನು ಕಳವು ಮಾಡಲಾಗಿದೆ. ಈ ಕುರಿತು ತಮನ್ನಾ ಜಬೀನ್ ಅವರು ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 101/2026, ಕಲಂ: 305 BNS - 2023 ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.







Comments