ಕಡಬ: ಅಂಬೇಡ್ಕರ್ ಭವನದಲ್ಲಿ ಅಕ್ರಮ ಮನಿ ಸರ್ಕ್ಯುಲೇಷನ್ ಜಾಲ ಪತ್ತೆ, 8 ಜನರ ವಿರುದ್ಧ ಎಫ್‌ಐಆರ್

ಕಡಬ ಪೇಟೆಯ ಅಂಬೇಡ್ಕರ್ ಭವನದಲ್ಲಿ ಸಾರ್ವಜನಿಕರಿಗೆ ಆಮಿಷವೊಡ್ಡಿ ನಿಷೇಧಿತ ಮನಿ ಸರ್ಕ್ಯುಲೇಷನ್ ಯೋಜನೆ ನಡೆಸುತ್ತಿದ್ದ ಜಾಲವನ್ನು ಕಡಬ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಸಂಸ್ಥೆಯ ಮಾಲೀಕರು ಹಾಗೂ ಸ್ಥಳೀಯ ಏಜೆಂಟರು ಸೇರಿದಂತೆ ಒಟ್ಟು 8 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ದಿನಾಂಕ 23.08.2026 ರಂದು ಸಿಕ್ಕ ಗುಪ್ತಚರ ಮಾಹಿತಿ ಆಧರಿಸಿ ಕಡಬ ಪೊಲೀಸರು ದಾಳಿ ನಡೆಸಿದಾಗ, ಹಾವೇರಿ ಮೂಲದ 'ಕಿಂಗ್ಸ್ ಬಜಾರ್' (KINGS Bazaar) ಹೆಸರಿನಲ್ಲಿ ಸಾರ್ವಜನಿಕರನ್ನು ಸೇರಿಸಿ ಸಭೆ ನಡೆಸುತ್ತಿರುವುದು ಕಂಡುಬಂದಿದೆ. "ಕಂಪನಿಗೆ ಹಣ ತೊಡಗಿಸಿದರೆ ಶೀಘ್ರವಾಗಿ ಭಾರಿ ಲಾಭ ಗಳಿಸಬಹುದು, ರಿಯಾಯಿತಿ ದರದಲ್ಲಿ ವಸ್ತುಗಳನ್ನು ಪಡೆಯಬಹುದು ಮತ್ತು ಹೊಸ ಸದಸ್ಯರನ್ನು ಸೇರಿಸಿದರೆ ಪ್ರತಿದಿನ ಕಮಿಷನ್ ಸಿಗುತ್ತದೆ" ಎಂದು ನಂಬಿಸಿ ಸಾರ್ವಜನಿಕರಿಂದ ಹಣ ವಸೂಲಿ ಮಾಡಲಾಗುತ್ತಿತ್ತು.
ಸಾರ್ವಜನಿಕರಲ್ಲಿ ದುರಾಶೆ ಹುಟ್ಟಿಸಿ ಅಕ್ರಮವಾಗಿ ಹಣ ಸಂಗ್ರಹಿಸುತ್ತಿದ್ದ ಹಿನ್ನೆಲೆಯಲ್ಲಿ, ಕಡಬ ಪೊಲೀಸ್ ಠಾಣೆಯಲ್ಲಿ ಪ್ರೈಜ್ ಚಿಟ್ಸ್ ಮತ್ತು ಮನಿ ಸರ್ಕ್ಯುಲೇಷನ್ ಸ್ಕಿಮ್ಸ್ ನಿಷೇಧ ಕಾಯ್ದೆಯಡಿ (ಅಪರಾಧ ಸಂಖ್ಯೆ: 100/2026) ಪ್ರಕರಣ ದಾಖಲಾಗಿದೆ. ಠಾಣಾಧಿಕಾರಿ ಜಂಬುರಾಜ್ ಮಹಾಜನ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.







Comments