ಸು ಫ್ರಮ್ ಸೋ' ನಟನ ಕಲ್ಯಾಣೋತ್ಸವ: ರಶ್ಮಿಕಾ ಜೊತೆ ಸಪ್ತಪದಿ ತುಳಿದ ಜೆಪಿ ತುಮ್ಮಿನಾಡು
- May 6
- 1 min read

ಮಂಗಳೂರು, ಮೇ 6:
ಕನ್ನಡ ಹಾಗೂ ತುಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಜೆಪಿ ತುಮ್ಮಿನಾಡು ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ದೀರ್ಘಕಾಲದ ಗೆಳತಿ ರಶ್ಮಿಕಾ ಜೊತೆ ಮಂಗಳೂರಿನಲ್ಲಿ ನಡೆದ ಸರಳ ಹಾಗೂ ಸಂಪ್ರದಾಯಬದ್ಧ ಸಮಾರಂಭದಲ್ಲಿ ಸಪ್ತಪದಿ ತುಳಿದರು.

ರಾಜ್ ಬಿ ಶೆಟ್ಟಿ ನಿರ್ಮಾಣದ Su From So ಚಿತ್ರದ ಮೂಲಕ ನಿರ್ದೇಶಕ ಹಾಗೂ ನಟನಾಗಿ ಗಮನ ಸೆಳೆದಿದ್ದ ಜೆಪಿ ತುಮ್ಮಿನಾಡು ಅವರ ಮದುವೆ ಸಮಾರಂಭಕ್ಕೆ ಕುಟುಂಬಸ್ಥರು, ಆಪ್ತರು ಹಾಗೂ ಸ್ನೇಹಿತರು ಸಾಕ್ಷಿಯಾದರು. ನಟ ಪ್ರಕಾಶ್ ತುಮ್ಮಿನಾಡು ಸೇರಿದಂತೆ ಅನೇಕರು ಸಮಾರಂಭದಲ್ಲಿ ಭಾಗವಹಿಸಿ ನವದಂಪತಿಗಳಿಗೆ ಶುಭ ಹಾರೈಸಿದರು.
ಕಳೆದ ಎರಡು ದಿನಗಳಿಂದ ಮದುವೆ ಪೂರ್ವ ಶಾಸ್ತ್ರಗಳು ಜರುಗುತ್ತಿದ್ದರೆ, ಇಂದು (ಮೇ 6) ಮಾಂಗಲ್ಯಧಾರಣೆ ವಿಧಿ ನೆರವೇರಿತು. ಮದುವೆಯ ಸುಂದರ ಕ್ಷಣಗಳ ಫೋಟೋ ಹಾಗೂ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ತುಳು ರಂಗಭೂಮಿಯಲ್ಲಿ ತಮ್ಮ ಕಲಾ ಪಯಣ ಆರಂಭಿಸಿದ ಜೆಪಿ ತುಮ್ಮಿನಾಡು, ಇದೇ ಅವಧಿಯಲ್ಲಿ ರಶ್ಮಿಕಾ ಅವರೊಂದಿಗೆ ಪರಿಚಯ ಬೆಳೆಸಿ, ಸ್ನೇಹವನ್ನು ಪ್ರೀತಿಯನ್ನಾಗಿ ರೂಪಿಸಿಕೊಂಡಿದ್ದರು. ಇದೀಗ ಆ ಸ್ನೇಹ ಪ್ರೀತಿಯಾಗಿ, ಪ್ರೀತಿ ದಾಂಪತ್ಯವಾಗಿ ಮಾರ್ಪಟ್ಟಿದೆ.







Comments