ಜೈಲು ಕೈದಿಗಳ ಭೇಟಿಗೆ ಹೊಸ ನಿಯಮ ಜಾರಿ

ಜೈಲುಗಳಲ್ಲಿನ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕಾರಾಗೃಹ ಮತ್ತು ಸುಧಾರಣಾ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಹೊಸ ಮಾರ್ಗಸೂಚಿ ಹೊರಡಿಸಿದ್ದಾರೆ. ದೀರ್ಘಕಾಲ ಒಂದೇ ಕಡೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ವರ್ಗಾವಣೆ ಮಾಡಲು ನಿರ್ಧರಿಸಲಾಗಿದ್ದು, ಕೈದಿಗಳ ಭೇಟಿ ಪ್ರಕ್ರಿಯೆಯಲ್ಲಿ ಪ್ರಮುಖ ಬದಲಾವಣೆ ತರಲಾಗಿದೆ.
ವಿಶೇಷ ಸಂದರ್ಶನದ ಅಡಿಯಲ್ಲಿ, ಗಂಭೀರ ಅನಾರೋಗ್ಯ ಅಥವಾ ಗಾಯಗೊಂಡು ನಡೆಯಲು ಸಾಧ್ಯವಾಗದ ಕೈದಿಗಳಿಗೆ ಮಾತ್ರ ತಿಂಗಳಿಗೊಮ್ಮೆ ಕುಟುಂಬದವರನ್ನು ಭೇಟಿ ಮಾಡಲು ಅವಕಾಶ ನೀಡಲಾಗಿದೆ. ಸಾಮಾನ್ಯ ಭೇಟಿಗಳ ಮೇಲೆ ನಿಗಾ ಇರಿಸಲು ಮತ್ತು ಶಿಸ್ತು ಕಾಪಾಡಲು ಈ ಕಠಿಣ ನಿಯಮ ರೂಪಿಸಲಾಗಿದೆ.

ಕೈದಿಗಳ ಊಟೋಪಚಾರದಲ್ಲೂ ಸುಧಾರಣೆ ತರಲಾಗಿದ್ದು, ಜೈಲಿನ ಆಡಳಿತ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪಾರದರ್ಶಕಗೊಳಿಸುವುದು ಈ ಕ್ರಮದ ಉದ್ದೇಶವಾಗಿದೆ. ಇದು ಜೈಲುಗಳಲ್ಲಿ ನಡೆಯುವ ಅಕ್ರಮಗಳಿಗೆ ಬ್ರೇಕ್ ಹಾಕಲಿದೆ ಎಂದು ನಿರೀಕ್ಷಿಸಲಾಗಿದೆ.







Comments