ಇರಾನ್-ಇಸ್ರೇಲ್ ಸಂಘರ್ಷ: ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಿಗೆ

ಇರಾನ್ ಮೇಲಿನ ಬಾಂಬ್ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ಎರಡು ವಾರಗಳ ಕಾಲ ಸ್ಥಗಿತಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಿಎನ್‌ಎನ್ ವರದಿ ಮಾಡಿದೆ. ಇಸ್ರೇಲ್‌ನ ಸರ್ಕಾರಿ ಮಾಧ್ಯಮ 'ಕಾನ್' ಕೂಡ ಇಸ್ರೇಲ್ ಈ ಕದನ ವಿರಾಮಕ್ಕೆ ಸಮ್ಮತಿಸಿದೆ ಎಂದು ದೃಢಪಡಿಸಿದೆ. ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆದ ಸುದೀರ್ಘ ಮಾತುಕತೆಗಳ ನಂತರ ಈ ಮಹತ್ವದ ಬೆಳವಣಿಗೆ ನಡೆದಿದ್ದು, ಪಶ್ಚಿಮ ಏಷ್ಯಾದಲ್ಲಿ ಸದ್ಯಕ್ಕೆ ಉದ್ವಿಗ್ನತೆ ಕಡಿಮೆಯಾಗುವ ಮುನ್ಸೂಚನೆ ಲಭಿಸಿದೆ.

ಇರಾನ್‌ನ ಸುಪ್ರೀಂ ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್ ಈ ಒಪ್ಪಂದಕ್ಕೆ ಅಂತಿಮ ಅನುಮೋದನೆ ನೀಡಿದ್ದು, ನೂತನ ಸುಪ್ರೀಂ ನಾಯಕ ಆಯತೊಲ್ಲಾ ಮೊಜ್ತಬಾ ಖಾಮಿನೈ ಅವರು ಇದಕ್ಕೆ ಸಹಿ ಹಾಕಿದ್ದಾರೆ. ಈ ಕದನ ವಿರಾಮವನ್ನು ಇರಾನ್ ತನ್ನ "ದೊಡ್ಡ ಗೆಲುವು" ಎಂದು ಬಣ್ಣಿಸಿದೆ. ಮುಂದಿನ ದಿನಗಳಲ್ಲಿ ಈ ತಾತ್ಕಾಲಿಕ ಒಪ್ಪಂದವನ್ನು ಶಾಶ್ವತ ಕದನ ವಿರಾಮವನ್ನಾಗಿ ಪರಿವರ್ತಿಸಲು ರಾಜತಾಂತ್ರಿಕ ಮಾತುಕತೆಗಳು ಮುಂದುವರಿಯಲಿವೆ ಎಂದು ಅಲ್ ಜಜೀರಾ ವರದಿ ಮಾಡಿದೆ.







Comments