ಹಾರ್ಮುಜ್ ಜಲಸಂಧಿಯಲ್ಲಿ ಭಾರತದ 18 ಹಡಗುಗಳು ಬಂದಿ: ದೇಶದಲ್ಲಿ ಇಂಧನ ಅಭಾವದ ಭೀತಿ!

ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಅಮೆರಿಕ-ಇರಾನ್ ಯುದ್ಧವು ಭಾರತದ ಇಂಧನ ಭದ್ರತೆಯ ಮೇಲೆ ನೇರ ಪರಿಣಾಮ ಬೀರಿದೆ. ವಿಶ್ವದ ಅತ್ಯಂತ ಸೂಕ್ಷ್ಮ ಸಮುದ್ರ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಧ್ವಜ ಹೊಂದಿರುವ 18 ಬೃಹತ್ ಹಡಗುಗಳು ಸಿಲುಕಿಕೊಂಡಿದ್ದು, ಇಂಧನ ಸಾಗಾಟ ಸ್ಥಗಿತಗೊಂಡಿದೆ ಎಂದು ಕೇಂದ್ರ ನೌಕಾಯಾನ ಸಚಿವಾಲಯದ ಮೂಲಗಳು ತಿಳಿಸಿವೆ.

ಈ ಹಡಗುಗಳಲ್ಲಿ ಭಾರತದ ಅಡುಗೆ ಮನೆಗಳಿಗೆ ಅತ್ಯಗತ್ಯವಾದ ಎಲ್‌ಪಿಜಿ (LPG) ಮತ್ತು ದೇಶದ ಇಂಧನ ಅಗತ್ಯದ ಬೆನ್ನೆಲುಬಾಗಿರುವ ಕಚ್ಚಾ ತೈಲ (Crude Oil) ಹಾಗೂ ಪೆಟ್ರೋಲಿಯಂ ಉತ್ಪನ್ನಗಳಿವೆ. ಯುದ್ಧದ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಹಡಗುಗಳ ಸಂಚಾರಕ್ಕೆ ತೀವ್ರ ನಿರ್ಬಂಧ ಹೇರಲಾಗಿದೆ.
ಸಿಲುಕಿರುವ ಈ ಹಡಗುಗಳಲ್ಲಿ ನೂರಾರು ಭಾರತೀಯ ನಾವಿಕರಿದ್ದು, ಅವರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತವಾಗಿದೆ. ಭಾರತೀಯ ನೌಕಾಪಡೆಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಅಗತ್ಯವಿದ್ದರೆ ‘ಆಪರೇಷನ್ ಸಂಕಲ್ಪ್’ ಅಡಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುವ ಸಾಧ್ಯತೆಯಿದೆ.







Comments