ಫ್ರಾನ್ಸ್‌ನಲ್ಲಿ ಭೀಕರ ವಿಮಾನ ಅಪಘಾತ: 11 ಸ್ಕೈಡೈವರ್‌ಗಳ ಸಾವು

ಈಶಾನ್ಯ ಫ್ರಾನ್ಸ್‌ನ ನ್ಯಾನ್ಸಿ ಬಳಿಯ ಟೊಂಬ್ಲೇನ್ ಪಟ್ಟಣದಲ್ಲಿ ಭಾನುವಾರ ಸಂಭವಿಸಿದ ಭೀಕರ ನಾಗರಿಕ ವಿಮಾನ ಅಪಘಾತದಲ್ಲಿ ಕನಿಷ್ಠ 11 ಜನರು ದುರಂತ ಅಂತ್ಯ ಕಂಡಿದ್ದಾರೆ. ಮೃತರನ್ನು ಪೈಲಟ್ ಮತ್ತು ಹತ್ತು ಪ್ರಯಾಣಿಕರು ಎಂದು ಗುರುತಿಸಲಾಗಿದೆ.
ಅಪಘಾತಕ್ಕೀಡಾದ ವಿಮಾನವು ಸ್ಥಳೀಯ ಪ್ಯಾರಾಚೂಟಿಸ್ಟ್ ಶಾಲೆಗೆ ಸೇರಿದ್ದಾಗಿದ್ದು, ಸ್ಕೈಡೈವಿಂಗ್ ಪ್ರವಾಸದಲ್ಲಿದ್ದ ಜನರ ಗುಂಪನ್ನು ಹೊತ್ತೊಯ್ಯುತ್ತಿತ್ತು. ಟೊಂಬ್ಲೇನ್ ವಿಮಾನ ನಿಲ್ದಾಣದ ಸಮೀಪದಲ್ಲೇ ಈ ದುರಂತ ಸಂಭವಿಸಿದೆ ಎಂದು ಸ್ಥಳೀಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಫ್ರೆಂಚ್ ಆಂತರಿಕ ಸಚಿವರು ಧಾವಿಸುತ್ತಿದ್ದು, ತನಿಖೆ ಆರಂಭವಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಅಪಘಾತದ ಸುತ್ತಮುತ್ತಲಿನ ಪ್ರದೇಶಕ್ಕೆ ಸಾರ್ವಜನಿಕರು ಬರದಂತೆ ಪೊಲೀಸರು ಮನವಿ ಮಾಡಿದ್ದಾರೆ. ಇದು ಈ ವರ್ಷದ ಅತ್ಯಂತ ಮಾರಕ ವಿಮಾನ ಅಪಘಾತವಾಗಿದೆ.







Comments