ಪೆಟ್ರೋಲ್ ಸಿಗಲ್ಲ ಎಂಬ ಫೇಕ್ ಮೆಸೇಜ್ ನಂಬಿ ಕಂಗಾಲಾದ ಬೆಳಗಾವಿ ಜನ; ರಾತ್ರೋರಾತ್ರಿ ಬಂಕ್‌ಗಳಿಗೆ ಮುಗಿಬಿದ್ದ ವಾಹನ ಸವಾರರು!

ಬೆಳಗಾವಿಯಲ್ಲಿ ಪೆಟ್ರೋಲ್ ಅಭಾವದ ಸುಳ್ಳು ಸುದ್ದಿ ಹಬ್ಬಿದ್ದರಿಂದ, ಗಾಬರಿಗೊಂಡ ಸಾರ್ವಜನಿಕರು ಬಂಕ್‌ಗಳ ಮುಂದೆ ಮುಗಿಬಿದ್ದ ಘಟನೆ ನಡೆದಿದೆ. ಸೋಮವಾರ ರಾತ್ರಿ ನಗರದ ಪ್ರಮುಖ ವೃತ್ತಗಳ ಪೆಟ್ರೋಲ್ ಬಂಕ್‌ಗಳಲ್ಲಿ ಕಿಲೋಮೀಟರ್‌ಗಟ್ಟಲೆ ಸಾಲು ಕಂಡುಬಂದಿದ್ದು, ಜನರು ಬಾಟಲಿಗಳಲ್ಲೂ ಇಂಧನ ತುಂಬಿಸಿಕೊಳ್ಳಲು ಪರದಾಡಿದರು.

ದೇಶದಲ್ಲಿ ಇಂಧನ ಪೂರೈಕೆಗೆ ಯಾವುದೇ ಅಡಚಣೆಯಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಸಾರ್ವಜನಿಕರು ಇಂತಹ ವದಂತಿಗಳಿಗೆ ಕಿವಿಗೊಡಬಾರದು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ದಿಢೀರ್ ದಟ್ಟಣೆಯಿಂದಾಗಿ ಬಂಕ್ ಸಿಬ್ಬಂದಿ ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು.







Comments