ಕಂಬ ಸಹಿತ ರಸ್ತೆ ಕಾಂಕ್ರೀಟೀಕರಣ: ಸುಳ್ಯದಲ್ಲಿ ವಿಲಕ್ಷಣ ಕಾಮಗಾರಿ ವೈರಲ್!

ಸುಳ್ಯದ ಪದವಿ ಪೂರ್ವ ಕಾಲೇಜು ಬಳಿಯಿಂದ ಶಾಸ್ತ್ರಿ ಸರ್ಕಲ್‌ಗೆ ಸಂಪರ್ಕಿಸುವ ಒಳರಸ್ತೆಯಲ್ಲಿ ಇತ್ತೀಚೆಗೆ ವಿಲಕ್ಷಣ ಘಟನೆಯೊಂದು ಬೆಳಕಿಗೆ ಬಂದಿದೆ. ಸ್ಥಳೀಯ ಆಡಳಿತ ಕೈಗೆತ್ತಿಕೊಂಡಿದ್ದ ರಸ್ತೆ ಅಭಿವೃದ್ಧಿಯ ಕಾಂಕ್ರೀಟೀಕರಣ ಕಾಮಗಾರಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಇಲ್ಲಿನ ಗುತ್ತಿಗೆದಾರ ಮತ್ತು ಇಂಜಿನಿಯರ್ ಜುಗಲ್ ಬಂದಿಯಿಂದಾಗಿ ರಸ್ತೆ ಬದಿಯ ವಿದ್ಯುತ್ ಕಂಬಗಳನ್ನೂ ಸೇರಿಸಿ ಕಾಂಕ್ರೀಟ್ ಹಾಕಲಾಗಿದೆ. ಕಂಬಗಳನ್ನು ಸ್ಥಳಾಂತರಿಸದೆಯೇ ಈ ರೀತಿ ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸಿರುವುದು ಸಾರ್ವಜನಿಕರ ಆಶ್ಚರ್ಯ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ಈ ಎಡವಟ್ಟಿನ ಫೋಟೋ ಹಾಗೂ ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಗುಲ್ಲೆಬ್ಬಿಸುತ್ತಿವೆ. ನೆಟ್ಟಿಗರು ಸಂಬಂಧಪಟ್ಟ ಅಧಿಕಾರಿಗಳ ಬೇಜವಾಬ್ದಾರಿತನವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.







Comments