;
top of page

ಡಾಲರ್ ಎದುರು ರೂಪಾಯಿ ಭರ್ಜರಿ ಚೇತರಿಕೆ: 12 ವರ್ಷಗಳಲ್ಲೇ ದಾಖಲೆಯ ಏರಿಕೆ!

  • Apr 2
  • 1 min read

ಭಾರತೀಯ ರೂಪಾಯಿ ಅಮೆರಿಕನ್ ಡಾಲರ್ ಎದುರು ಕಳೆದ 12 ವರ್ಷಗಳಲ್ಲೇ ಒಂದೇ ದಿನದಲ್ಲಿ ಅತಿದೊಡ್ಡ ಏರಿಕೆಯನ್ನು ದಾಖಲಿಸುವ ಮೂಲಕ ಗಮನಸೆಳೆದಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ರೂಪಾಯಿ ಮೌಲ್ಯದ ಮೇಲೆ ನಡೆಯುವ ಊಹಾಪೋಹದ ವಹಿವಾಟುಗಳಿಗೆ ಕಠಿಣ ಕಡಿವಾಣ ಹಾಕಿದ ಬೆನ್ನಲ್ಲೇ ಈ ಬದಲಾವಣೆ ಕಂಡಬಂದಿದೆ. ಆರ್‌ಬಿಐನ ಈ ಸಮಯೋಚಿತ ಕ್ರಮದಿಂದಾಗಿ ರೂಪಾಯಿ ಮೌಲ್ಯವು ಒಂದೇ ದಿನದಲ್ಲಿ ಸುಮಾರು 1.8% ನಷ್ಟು ಭರ್ಜರಿ ಏರಿಕೆ ಕಂಡಿದೆ.

ಮಾರ್ಚ್ 31ರಂದು ಪ್ರತಿ ಡಾಲರ್‌ಗೆ 95 ರೂಪಾಯಿ ಗಡಿ ದಾಟಿದ್ದ ಮೌಲ್ಯವು, ಇಂದು ಇಳಿಕೆ ಕಂಡು 93.14 ರೂಪಾಯಿ ಅಸುಪಾಸಿನಲ್ಲಿ ವ್ಯವಹಾರ ನಡೆಸುತ್ತಿದೆ. ವಿದೇಶಿ ಹೂಡಿಕೆದಾರರಲ್ಲಿ ಮರಳಿದ ವಿಶ್ವಾಸ ಮತ್ತು ಕೇಂದ್ರ ಬ್ಯಾಂಕಿನ ಹಸ್ತಕ್ಷೇಪವು ರೂಪಾಯಿಗೆ ಹೆಚ್ಚಿನ ಶಕ್ತಿ ನೀಡಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತಗಳ ನಡುವೆಯೂ ಭಾರತೀಯ ಕರೆನ್ಸಿಯ ಈ ಬಲಿಷ್ಠ ಚೇತರಿಕೆಯು ದೇಶದ ಆರ್ಥಿಕತೆಗೆ ಸಕಾರಾತ್ಮಕ ಮುನ್ಸೂಚನೆಯಾಗಿದೆ.


Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page