ಕರ್ನಾಟಕಕ್ಕೆ ಹೊಸ ಸಿಎಂ: ಡಿಕೆ ಶಿವಕುಮಾರ್ ಪ್ರಮಾಣವಚನ ಯಾವಾಗ, ಎಲ್ಲಿ? ಇಂದು ತೀರ್ಮಾನ
- May 29
- 1 min read

ಬೆಂಗಳೂರು, ಮೇ 29: ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ರಾಜ್ಯಪಾಲ ಶುಕ್ರವಾರ ಬೆಳಗ್ಗೆ ಅಧಿಕೃತವಾಗಿ ಅಂಗೀಕರಿಸಿದ್ದಾರೆ. ಈ ಬೆಳವಣಿಗೆಯಿಂದ ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಪ್ರಕ್ರಿಯೆ ಅಂತಿಮ ಹಂತ ತಲುಪಿದೆ.
ನೂತನ ಮುಖ್ಯಮಂತ್ರಿಯಾಗಿ ಯಾರು ಅಧಿಕಾರ ಸ್ವೀಕರಿಸಲಿದ್ದಾರೆ ಎಂಬುದನ್ನು ಪಕ್ಷ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಆದರೆ, ಗುರುವಾರ ನಡೆದ ಉಪಹಾರ ಸಭೆಯಲ್ಲಿ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಸಚಿವರಿಗೆ ಮಾಹಿತಿ ನೀಡಿದರೆಂಬ ಸುದ್ದಿ ಹರಿದಾಡುತ್ತಿದೆ.
ಪ್ರಸ್ತುತ ಮತ್ತು ದೆಹಲಿಯಲ್ಲಿ ಇದ್ದು, ನೂತನ ಮುಖ್ಯಮಂತ್ರಿ ಪ್ರಮಾಣವಚನ ಹಾಗೂ ಸಚಿವ ಸಂಪುಟ ರಚನೆ ಕುರಿತಂತೆ ಹೈಕಮಾಂಡ್ ಜೊತೆ ಮಹತ್ವದ ಚರ್ಚೆ ನಡೆಸುತ್ತಿದ್ದಾರೆ.
ಪ್ರಮಾಣವಚನ ಯಾವಾಗ?
ಹೊಸ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಹಾಗೂ ಸಚಿವ ಸಂಪುಟದ ಪ್ರಮಾಣವಚನದ ದಿನಾಂಕ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ. ಆದರೆ, ಉತ್ತಮ ಮುಹೂರ್ತದ ಹುಡುಕಾಟ ನಡೆಯುತ್ತಿದ್ದು, ಜ್ಯೋತಿಷಿ ದ್ವಾರಕಾನಾಥ್ ಅವರೊಂದಿಗೆ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ. ಮೂರು ಸಾಧ್ಯ ಮುಹೂರ್ತಗಳನ್ನು ಸೂಚಿಸುವಂತೆ ಕೇಳಲಾಗಿದೆ.
ಇದಲ್ಲದೆ, ಎಐಸಿಸಿ ಪ್ರಮುಖ ನಾಯಕರುಗಳಾದ ಹಾಗೂ ಅವರ ಲಭ್ಯತೆ ಆಧರಿಸಿ ಅಂತಿಮ ದಿನಾಂಕ ನಿಗದಿಯಾಗುವ ಸಾಧ್ಯತೆ ಇದೆ.
ಪ್ರಮಾಣವಚನ ಎಲ್ಲಿ?
ಪ್ರಮಾಣವಚನ ಸ್ವೀಕಾರ ಸಮಾರಂಭದ ಸ್ಥಳವನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ದೆಹಲಿಯಲ್ಲಿ ನಡೆಯುತ್ತಿರುವ ಹೈಕಮಾಂಡ್ ಸಭೆಯ ಬಳಿಕ ಸಂಪುಟದ ವಿವರಗಳೊಂದಿಗೆ ಸ್ಥಳವೂ ಘೋಷಣೆಯಾಗುವ ನಿರೀಕ್ಷೆ ಇದೆ.
ಅತಿಥಿಗಳ ಪಟ್ಟಿ
ಈ ಸಮಾರಂಭಕ್ಕೆ ಎಐಸಿಸಿ ಅಧ್ಯಕ್ಷ , ಲೋಕಸಭೆ ಪ್ರತಿಪಕ್ಷ ನಾಯಕ , ಕಾಂಗ್ರೆಸ್ ನಾಯಕಿ , ಪ್ರಧಾನ ಕಾರ್ಯದರ್ಶಿ , ರಾಜ್ಯ ಉಸ್ತುವಾರಿ ಸೇರಿದಂತೆ ಹಲವು ಪ್ರಮುಖ ನಾಯಕರು ಭಾಗವಹಿಸುವ ನಿರೀಕ್ಷೆ ಇದೆ.
ಒಟ್ಟಿನಲ್ಲಿ, ದೆಹಲಿಯಲ್ಲಿ ನಡೆಯಲಿರುವ ಇಂದಿನ ಮಹತ್ವದ ಸಭೆಯ ಬಳಿಕ ಮುಖ್ಯಮಂತ್ರಿಯ ಪ್ರಮಾಣವಚನದ ದಿನಾಂಕ, ಸ್ಥಳ ಮತ್ತು ಸಂಪುಟದ ಸಂಪೂರ್ಣ ಚಿತ್ರಣ ಸ್ಪಷ್ಟವಾಗಲಿದೆ.







Comments