ಸಿಎನ್‌ಜಿ ದರ ಮತ್ತೆ ಭಾರಿ ಏರಿಕೆ: ವಾಹನ ಚಾಲಕರಿಗೆ ಶಾಕ್

ಪೆಟ್ರೋಲ್, ಡೀಸೆಲ್ ಬೆನ್ನಲ್ಲೇ ಮುಂಬೈನಲ್ಲಿ ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‌ಜಿ) ದರವನ್ನು ಪ್ರತಿ ಕೆಜಿಗೆ 2 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಅನಿಲ ವಿತರಕ ಮಹಾನಗರ ಗ್ಯಾಸ್ ಲಿಮಿಟೆಡ್ (ಎಂಜಿಎಲ್) ಈ ಹೊಸ ಪರಿಷ್ಕೃತ ದರವನ್ನು ಪ್ರಕಟಿಸಿದೆ.
ಈ ಬೆಲೆ ಏರಿಕೆಯ ನಂತರ ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಎನ್‌ಜಿ ದರ ಪ್ರತಿ ಕೆಜಿಗೆ 86 ರೂ. ತಲುಪಿದೆ. ಇದರೊಂದಿಗೆ ಗೃಹ ಬಳಕೆಯ ಪಿಎನ್‌ಜಿ ದರವನ್ನು ಕೂಡ ಪ್ರತಿ ಕ್ಯೂಬಿಕ್ ಮೀಟರ್‌ಗೆ 50 ಪೈಸೆ ಹೆಚ್ಚಳ ಮಾಡಲಾಗಿದೆ.
ಕಳೆದ ಕೆಲ ದಿನಗಳಲ್ಲಿ ಮುಂಬೈನಲ್ಲಿ ನಡೆದಿರುವ 2ನೇ ದರ ಏರಿಕೆ ಇದಾಗಿದ್ದು, ಸಾರ್ವಜನಿಕರಿಗೆ ದೊಡ್ಡ ಆರ್ಥಿಕ ಹೊರೆಯಾಗಿದೆ. ಮುಖ್ಯವಾಗಿ ಆಟೋ, ಟ್ಯಾಕ್ಸಿ ಹಾಗೂ ವಾಣಿಜ್ಯ ವಾಹನ ಚಾಲಕರ ದೈನಂದಿನ ಆದಾಯದ ಮೇಲೆ ಇದು ತೀವ್ರ ಪರಿಣಾಮ ಬೀರಲಿದೆ.







Comments