ಬೆಂಗಳೂರು: ಬೆಕ್ಕುಗಳ 'ಲವ್ ಸ್ಟೋರಿ'ಗೆ ಪೊಲೀಸರ ಎಂಟ್ರಿ; ವಿಚಿತ್ರ ಜಗಳಕ್ಕೆ ಸುಖಾಂತ್ಯ

ಬೆಂಗಳೂರಿನಲ್ಲಿ ಬೆಕ್ಕುಗಳ 'ಪ್ರೇಮ್ ಕಹಾನಿ' ನೆರೆಹೊರೆಯವರ ನಡುವೆ ದೊಡ್ಡ ಜಗಳಕ್ಕೆ ಕಾರಣವಾದ ವಿಚಿತ್ರ ಘಟನೆ ನಡೆದಿದೆ. ಹೆಣ್ಣು ಬೆಕ್ಕು ನಾಲ್ಕು ಮರಿಗಳಿಗೆ ಜನ್ಮ ನೀಡಿದ್ದಕ್ಕೆ, ಗಂಡು ಬೆಕ್ಕಿನ ಮಾಲೀಕರೇ ಕಾರಣ ಎಂದು ಆರೋಪಿಸಿ ಜಗಳ ಶುರುವಾಗಿದೆ. ಮರಿಗಳನ್ನು ನೀವೇ ಸಾಕಬೇಕೆಂದು ಗಂಡು ಬೆಕ್ಕಿನ ಮನೆಯ ಮುಂದೆ ಬಿಟ್ಟು, ಆ್ಯಸಿಡ್ ಹಾಕುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯಪ್ರವೇಶಿಸಬೇಕಾಯಿತು.

ಸ್ಥಳಕ್ಕೆ ಬಂದ ಪೊಲೀಸರು ಎರಡೂ ಕುಟುಂಬಗಳ ನಡುವೆ ಸಂಧಾನ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಕೊನೆಗೆ ಜನಿಸಿದ ನಾಲ್ಕು ಮರಿಗಳಲ್ಲಿ ತಲಾ ಎರಡು ಮರಿಗಳನ್ನು ಎರಡೂ ಮನೆಯವರು ಹಂಚಿಕೊಳ್ಳುವಂತೆ ಮಾಡುವ ಮೂಲಕ ಈ ಹಾಸ್ಯಮಯ ಪ್ರಕರಣಕ್ಕೆ ಸುಖಾಂತ್ಯ ಹಾಡಿದ್ದಾರೆ. ಪ್ರಾಣಿಗಳ ನೈಸರ್ಗಿಕ ಕ್ರಿಯೆ ಮನುಷ್ಯರ ನಡುವಿನ ಪೊಲೀಸ್ ಕೇಸ್ ವರೆಗೆ ಹೋಗಿದ್ದು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ.







Comments