;
top of page

ಜೀವಂತ ವ್ಯಕ್ತಿಯನ್ನೇ 'ಮೃತ' ಎಂದು ನಮೂದಿಸಿದ ಬಿಎಲ್‌ಒ: ಮಂಗಳೂರಿನಲ್ಲಿ ಮತದಾರರ ಪಟ್ಟಿ ಯಡವಟ್ಟು!

Sep 3
1 min read

ಮಂಗಳೂರು: ಬದುಕಿರುವ ವ್ಯಕ್ತಿಯೊಬ್ಬರನ್ನು ಮತದಾರರ ಸರ್ವೇ ಕರಡು ಪಟ್ಟಿಯಲ್ಲಿ 'ಮರಣ ಹೊಂದಿದ್ದಾರೆ' ಎಂದು ನಮೂದಿಸಿರುವ ಆಘಾತಕಾರಿ ಘಟನೆ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದಿದೆ.

ಮಂಗಳೂರಿನ ಬಿಜೈ ನಿವಾಸಿ, 61 ವರ್ಷದ ಡೊನಾಲ್ಡ್ ಜೋಸೆಫ್ ರೇಗೋ ಈ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಲಿಯಾದ ದುರ್ದೈವಿ. ಗಣತಿ ನಮೂನೆಯನ್ನು ಹಿಂದಿರುಗಿಸದೇ ಇರಲು 'ಮರಣ'ವೇ ಕಾರಣ ಎಂದು ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಮಾಧ್ಯಮಗಳ ಮುಂದೆ ತೀವ್ರ ಬೇಸರ ವ್ಯಕ್ತಪಡಿಸಿದ ಡೊನಾಲ್ಡ್ ರೇಗೋ, "ನಾನು ಇಲ್ಲೇ ಹುಟ್ಟಿ ಬೆಳೆದವನು. ನನ್ನ ಬಳಿ ಅಧಿಕೃತ ವೋಟರ್ ಐಡಿ ಇದೆ. ಹಿಂದೆ ಗಲ್ಫ್‌ನಲ್ಲಿದ್ದರೂ, ಪ್ರಸ್ತುತ ಊರಲ್ಲೇ ನೆಲೆಸಿದ್ದೇನೆ. ಕಳೆದ ಎಸ್‌ಐಆರ್ (SIR) ಪ್ರಕ್ರಿಯೆಯಲ್ಲಿ ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದರೂ, ಇತ್ತೀಚಿನ ಪರಿಶೀಲನೆ ವೇಳೆ 'ನೋ ರೆಕಾರ್ಡ್ಸ್ ಫೌಂಡ್' ಎಂದು ಬಂದಿದೆ. ಸಾಲದಕ್ಕೆ ನನ್ನನ್ನು 'ಮೃತ' ಎಂದು ನಮೂದಿಸಲಾಗಿದೆ. ಜೀವಂತವಾಗಿರುವ ನನಗೆ ಇದು ಯಾವ ರೀತಿಯ ನ್ಯಾಯ?" ಎಂದು ಆಕ್ರೋಶ ಹೊರಹಾಕಿದ್ದಾರೆ.

ಅಧಿಕಾರಿಗಳ ಈ ಬೇಜವಾಬ್ದಾರಿ ನಡೆ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಕೂಡಲೇ ತಪ್ಪನ್ನು ಸರಿಪಡಿಸಿ ಹಕ್ಕನ್ನು ಮರುಸ್ಥಾಪಿಸುವಂತೆ ಸಂತ್ರಸ್ತರು ಆಗ್ರಹಿಸಿದ್ದಾರೆ.


Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page