ಮಾಟ-ಮಂತ್ರದ ಭಯ ಹುಟ್ಟಿಸಿ ಅತ್ಯಾಚಾರ: ನಾಸಿಕ್‌ನ ಖತರ್ನಾಕ್ ಜ್ಯೋತಿಷಿ ಪೊಲೀಸ್ ವಶಕ್ಕೆ
- Mar 20
- 1 min read

ಮಹಾರಾಷ್ಟ್ರದ ನಾಸಿಕ್‌ನಲ್ಲಿ ಜ್ಯೋತಿಷ್ಯದ ಹೆಸರಿನಲ್ಲಿ ಮಹಿಳೆಯರನ್ನು ವಂಚಿಸುತ್ತಿದ್ದ ಸ್ವಯಂ ಘೋಷಿತ ಜ್ಯೋತಿಷಿ 'ಕ್ಯಾಪ್ಟನ್' ಅಶೋಕ್ ಖಾರಟ್‌ನನ್ನು ಪೊಲೀಸರು ಬಂಧಿಸಿದ್ದಾರೆ. 35 ವರ್ಷದ ಮಹಿಳೆಯ ಮೇಲೆ ಸತತ ಅತ್ಯಾಚಾರ ಎಸಗಿದ ದೂರಿನನ್ವಯ ಈ ಕ್ರಮ ಕೈಗೊಳ್ಳಲಾಗಿದ್ದು, ವಿಚಾರಣೆ ವೇಳೆ ಈತ ಸುಮಾರು 58 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಅವರ ಅಶ್ಲೀಲ ವಿಡಿಯೋಗಳನ್ನು ರಹಸ್ಯವಾಗಿ ಚಿತ್ರೀಕರಿಸಿರುವುದು ಪತ್ತೆಯಾಗಿದೆ.

ಮಾಜಿ ಮರ್ಚೆಂಟ್ ನೇವಿ ಅಧಿಕಾರಿಯಾದ ಖಾರಟ್, ತನ್ನ 'ಶಿವನಿಕಾ ಟ್ರಸ್ಟ್' ಮೂಲಕ ಜನರ ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿ ಮಹಿಳೆಯರನ್ನು ಸೆಳೆಯುತ್ತಿದ್ದನು. ಸಂತ್ರಸ್ತೆಯರಿಗೆ ಮಾದಕ ವಸ್ತು ನೀಡಿ ಸಂಮೋಹನಗೊಳಿಸುತ್ತಿದ್ದ ಈತ, ಮಾಟಮಂತ್ರ ಅಥವಾ ಪತಿಯ ಕೊಲೆ ಮಾಡುವ ಬೆದರಿಕೆ ಹಾಕಿ ದೌರ್ಜನ್ಯ ಎಸಗುತ್ತಿದ್ದನು. ಈತನ ವಿರುದ್ಧ ಅಂಧಾ ಶ್ರದ್ಧಾ ನಿರ್ಮೋಲನ್ ಸಮಿತಿಯು ಮೊದಲೇ ಎಚ್ಚರಿಕೆ ನೀಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ರಾಜಕೀಯ ಪ್ರಭಾವದ ಹಿನ್ನೆಲೆಯಲ್ಲಿ ಪೊಲೀಸರು ಅತ್ಯಂತ ಗೋಪ್ಯವಾಗಿ ಕಾರ್ಯಾಚರಣೆ ನಡೆಸಿದರು. ಮಧ್ಯರಾತ್ರಿ ಫಾರ್ಮ್ ಹೌಸ್ ಮುಂದೆ 'ಕಳ್ಳ ಬಂದಿದ್ದಾನೆ' ಎಂದು ಗದ್ದಲ ಸೃಷ್ಟಿಸಿ, ಆತ ಬಾಗಿಲು ತೆರೆದ ಕೂಡಲೇ ಬೆಡ್‌ರೂಮ್‌ನಲ್ಲೇ ಬಂಧಿಸಲಾಗಿದೆ. ದಾಳಿಯ ವೇಳೆ ಫಾರ್ಮ್ ಹೌಸ್‌ನಲ್ಲಿ ಅಕ್ರಮ ಪಿಸ್ತೂಲ್, ಗುಂಡುಗಳು ಹಾಗೂ ಶಂಕಾಸ್ಪದ ದಾಖಲೆಗಳು ಪತ್ತೆಯಾಗಿದ್ದು, ಸರ್ಕಾರವಾಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







Comments