ಆಟೋಮೊಬೈಲ್ ಕ್ಷೇತ್ರದಲ್ಲಿ ಬೆಲೆ ಏರಿಕೆ ಭೀತಿ: ಗ್ರಾಹಕರಿಗೆ ಬಿಳಲಿದೆ ಭಾರ
- Mar 22
- 1 min read

ಜಾಗತಿಕ ಯುದ್ಧದ ಪರಿಣಾಮ ಕೇವಲ ಕಚ್ಚಾ ತೈಲಕ್ಕೆ ಸೀಮಿತವಾಗದೆ, ವಾಹನ ಉತ್ಪಾದನೆಗೆ ಅಗತ್ಯವಿರುವ ಪ್ಲಾಸ್ಟಿಕ್, ಕಬ್ಬಿಣ ಮತ್ತು ಫೈಬರ್ ಪೂರೈಕೆಯಲ್ಲೂ ಭಾರಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಉತ್ಪಾದನಾ ವೆಚ್ಚ ಗಣನೀಯವಾಗಿ ಏರಿಕೆಯಾಗಿದ್ದು, ಮುಂದಿನ ವಾರದಿಂದ ಕಾರು ಮತ್ತು ಬೈಕ್‌ಗಳ ಬೆಲೆಯಲ್ಲಿ ಶೇಕಡ 10ರಿಂದ 15ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಪ್ರಮುಖವಾಗಿ ಪ್ರತಿ ಕಾರಿನ ಮೇಲೆ ಅಂದಾಜು 40ರಿಂದ 50 ಸಾವಿರ ರೂಪಾಯಿಗಳವರೆಗೆ ಹೊರೆ ಬೀಳಲಿದೆ ಎಂದು ಅಂದಾಜಿಸಲಾಗಿದೆ.

ಮಾರುತಿ ಸುಜುಕಿ, ಟಾಟಾ ಮೋಟಾರ್ಸ್ ಮತ್ತು ಮಹೀಂದ್ರಾ ಸೇರಿದಂತೆ ಪ್ರಮುಖ ಕಂಪನಿಗಳು ಈಗಾಗಲೇ ಬೆಲೆ ಏರಿಕೆಯ ಹಾದಿಯಲ್ಲಿವೆ. ಕಚ್ಚಾ ವಸ್ತುಗಳ ಕೊರತೆಯಿಂದಾಗಿ ವಾಹನ ತಯಾರಿಕಾ ಕಂಪನಿಗಳು ಅನಿವಾರ್ಯವಾಗಿ ಈ ನಿರ್ಧಾರಕ್ಕೆ ಬಂದಿವೆ. ಐಷಾರಾಮಿ ಕಾರುಗಳಾದ ಮರ್ಸಿಡಿಸ್ ಬೆಂಜ್ ಮತ್ತು ಕಿಯಾ ಕಂಪನಿಗಳು ಸಹ ತಮ್ಮ ವಾಹನಗಳ ದರವನ್ನು ಪರಿಷ್ಕರಿಸಲು ಸಜ್ಜಾಗಿದ್ದು, ಇದು ಹೊಸ ವಾಹನ ಖರೀದಿದಾರರ ಜೇಬಿಗೆ ಕತ್ತರಿ ಹಾಕುವುದಂತೂ ಖಚಿತವಾಗಿದೆ.







Comments