2027ರ ಜನಗಣತಿಯಲ್ಲಿ ಹೊಸ ನಿಯಮ: ಲಿವ್-ಇನ್ ಜೋಡಿಗಳಿಗೆ 'ವಿವಾಹಿತ' ಸ್ಥಾನಮಾನ
- Mar 31
- 1 min read

2027ರ ರಾಷ್ಟ್ರೀಯ ಜನಗಣತಿಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆಯನ್ನು ತಂದಿದೆ. ಅದರಂತೆ, ದೀರ್ಘಕಾಲದಿಂದ ಲಿವ್-ಇನ್ ಸಂಬಂಧದಲ್ಲಿರುವ ಮತ್ತು ತಮ್ಮ ಬಾಂಧವ್ಯವನ್ನು 'ಸ್ಥಿರ' ಎಂದು ಭಾವಿಸುವ ಜೋಡಿಗಳನ್ನು ಇನ್ಮುಂದೆ ಅಧಿಕೃತವಾಗಿ ವಿವಾಹಿತ ದಂಪತಿಗಳೆಂದೇ ಪರಿಗಣಿಸಲಾಗುತ್ತದೆ. ಜನಗಣತಿ ಇಲಾಖೆಯ ಅಧಿಕೃತ ವೆಬ್‌ಸೈಟ್‌ನ ಪ್ರಶ್ನೋತ್ತರ ವಿಭಾಗದಲ್ಲಿ ಈ ಬಗ್ಗೆ ಸ್ಪಷ್ಟನೆಯನ್ನು ನೀಡಲಾಗಿದ್ದು, ಸಾಮಾಜಿಕ ಬದಲಾವಣೆಗಳಿಗೆ ಪೂರಕವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಈ ಹೊಸ ನಿಯಮದ ಪ್ರಕಾರ, ಮದುವೆಯಾಗದಿದ್ದರೂ ಒಟ್ಟಾಗಿ ವಾಸಿಸುತ್ತಿರುವ ಜೋಡಿಗಳು ತಮ್ಮ ಸಂಬಂಧ ಸ್ಥಿರವಾಗಿದೆ ಎಂದು ಘೋಷಿಸಿಕೊಂಡರೆ, ಗಣತಿದಾರರು ಅವರನ್ನು ದಂಪತಿಗಳ ಪಟ್ಟಿಗೆ ಸೇರಿಸಲಿದ್ದಾರೆ. ಈ ಕ್ರಮವು ದೇಶದ ಜನಸಂಖ್ಯಾ ದಾಖಲಾತಿ ಪ್ರಕ್ರಿಯೆಯಲ್ಲಿ ಹೊಸ ಆಯಾಮವನ್ನು ನೀಡಲಿದ್ದು, ಆಧುನಿಕ ಜೀವನಶೈಲಿಯ ಸಂಬಂಧಗಳಿಗೆ ಅಧಿಕೃತ ಮಾನ್ಯತೆ ನೀಡುವ ದಾರಿಯಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.







Comments