2026-27ರ ಕಂಬಳ ವೇಳಾಪಟ್ಟಿ ಬಿಡುಗಡೆ: ಅಕ್ಟೋಬರ್ 18ರಿಂದ ಮೈಸೂರು ದಸರಾ ಕಂಬಳದೊಂದಿಗೆ ಸೀಸನ್ ಆರಂಭ!

ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ 2026-27ನೇ ಸಾಲಿನ ಅಧಿಕೃತ ಕಂಬಳ ವೇಳಾಪಟ್ಟಿಯನ್ನು ರಾಜ್ಯ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಬಿಡುಗಡೆ ಮಾಡಿದ್ದಾರೆ.

ಈ ಬಾರಿಯ ಕಂಬಳ ಋತುವು ಅಕ್ಟೋಬರ್ 18 ಮತ್ತು 19ರಂದು ಸಾಂಸ್ಕೃತಿಕ ನಗರಿ ಮೈಸೂರು ದಸರಾ ಅಂಗವಾಗಿ ನಡೆಯುವ ಕಂಬಳದೊಂದಿಗೆ ಆರಂಭಗೊಳ್ಳಲಿದೆ. ನವೆಂಬರ್ 7ರಂದು ಪಣಪಿಲ, ನವೆಂಬರ್ 14ರಂದು ಸಾಣೂರು, ಡಿಸೆಂಬರ್ 19ರಂದು ಮಂಗಳೂರು ಹಾಗೂ ಜನವರಿ 23ರಂದು ಮೂಡುಬಿದಿರೆಯಲ್ಲಿ ಕಂಬಳ ಕೂಟಗಳು ನಡೆಯಲಿವೆ.
2027ರ ಜನವರಿ 30ರಂದು ಪುತ್ತೂರಿನ ಪ್ರಸಿದ್ಧ ಕೋಟಿಚೆನ್ನಯ ಜೋಡುಕರೆ ಕಂಬಳ ಹಾಗೂ ಮಾರ್ಚ್ 27ರಂದು ಉಪ್ಪಿನಂಗಡಿಯ ವಿಜಯ ವಿಕ್ರಮ ಕಂಬಳ ಆಯೋಜನೆಗೊಂಡಿದೆ. ಐಕಳ, ಬಂಟ್ವಾಳ, ವೇಣೂರು ಸೇರಿದಂತೆ ಕರಾವಳಿಯ ವಿವಿಧ ಭಾಗಗಳಲ್ಲಿ ಜಾನಪದ ಕ್ರೀಡಾ ವೈಭವ ಕಳೆಗಟ್ಟಲಿದ್ದು, 2027ರ ಮೇ 1ರಂದು ಕಡಂದಲೆಯಲ್ಲಿ ನಡೆಯುವ ಅಂತಿಮ ಕಂಬಳದೊಂದಿಗೆ ಈ ಸೀಸನ್ ಮುಕ್ತಾಯಗೊಳ್ಳಲಿದೆ.







Comments