1ನೇ ತರಗತಿ ಪ್ರವೇಶದ ವಯೋಮಿತಿಯಲ್ಲಿ 60 ದಿನಗಳ ವಿನಾಯಿತಿ- ಸರ್ಕಾರ ಆದೇಶ
- Apr 10
- 1 min read

ರಾಜ್ಯ ಸರ್ಕಾರವು 1ನೇ ತರಗತಿ ದಾಖಲಾತಿಯ ವಯೋಮಿತಿಯಲ್ಲಿ 60 ದಿನಗಳ ಕಾಲ ಸಡಿಲಿಕೆ ನೀಡಿ ಇಂದು ಅಧಿಕೃತ ಆದೇಶ ಹೊರಡಿಸಿದೆ. 2026-27ನೇ ಶೈಕ್ಷಣಿಕ ಸಾಲಿಗೆ ಮಾತ್ರ ಅನ್ವಯವಾಗುವ ಈ ನಿಯಮದಂತೆ, ಜೂನ್ 1ಕ್ಕೆ ಮಗುವಿಗೆ ಆರು ವರ್ಷ ತುಂಬಲು ಗರಿಷ್ಠ 60 ದಿನಗಳ ಕೊರತೆಯಿದ್ದರೂ ದಾಖಲಾತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಈ ಹಿಂದೆ ಜಾರಿಯಲ್ಲಿದ್ದ ಕಡ್ಡಾಯ 6 ವರ್ಷಗಳ ನಿಯಮದಿಂದ ಪೋಷಕರಿಗೆ ಎದುರಾಗಿದ್ದ ಗೊಂದಲವನ್ನು ಈ ಆದೇಶ ನಿವಾರಿಸಿದೆ. ಶಾಲಾ ಪ್ರಾರಂಭದ ದಿನಾಂಕವನ್ನು ಆಧರಿಸಿ ವಯಸ್ಸನ್ನು ಲೆಕ್ಕಹಾಕುವಂತೆ ಸೂಚಿಸಲಾಗಿದ್ದು, ಈ ವಿನಾಯಿತಿಯು ಕೇವಲ ಪ್ರಸಕ್ತ ಸಾಲಿನ ದಾಖಲಾತಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.







Comments